ಕರ್ನಾಟಕ

karnataka

ETV Bharat / videos

ಸೆಲ್ಫಿ ಸ್ಪಾಟ್ ಆಯ್ತು ಹುಬ್ಬಳ್ಳಿ ಚೆನ್ನಮ್ಮ ವೃತ್ತ; ರಂಗೋಲಿಯಲ್ಲಿ ಅರಳಿದ ಮೋದಿ ಚಿತ್ರ - Chennamma Circle Selfie Spot

By

Published : Jan 12, 2023, 1:14 PM IST

Updated : Feb 3, 2023, 8:38 PM IST

ಹುಬ್ಬಳ್ಳಿ: ಯುವಜನೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಾಣಿಜ್ಯನಗರಿ ಹುಬ್ಬಳ್ಳಿಗೆ ಇಂದು ಆಗಮಿಸುತ್ತಿದ್ದಾರೆ. ಪ್ರಧಾನಿ ಸ್ವಾಗತಕ್ಕೆ ನಗರದ ದಿನೇಶ್ ಚಿಲ್ಲಾಳ ಎಂಬ ಕಲಾವಿದರು ವಿನೂತನ ರೀತಿಯಲ್ಲಿ ಕಲಾಕೃತಿಯನ್ನು ರಂಗೋಲಿಯಲ್ಲಿ ಬಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಹುಬ್ಬಳ್ಳಿಯ ರೈಲ್ವೇ ಮೈದಾನದಲ್ಲಿ ರಂಗೋಲಿಯಲ್ಲಿ ನರೇಂದ್ರ ಮೋದಿಯವರ ಭಾವಚಿತ್ರ ಅನಾವರಣಗೊಳಿಸಿದ್ದು, 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೋದಿ ಧರಿಸಿದ್ದ ಪೋಷಾಕಿನ ಚಿತ್ರವನ್ನು ರಚಿಸಲಾಗಿದೆ. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಚೆನ್ನಮ್ಮ ವೃತ್ತ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಸದ್ಯ ಜನರಿಗೆ ಚೆನ್ನಮ್ಮ ವೃತ್ತ ಸೆಲ್ಫಿ ಸ್ಪಾಟ್​ ಆಗಿ ಪರಿವರ್ತನೆ ಆಗಿದೆ.
Last Updated : Feb 3, 2023, 8:38 PM IST

ABOUT THE AUTHOR

...view details