ಭಾರತ್ ಜೋಡೋ ಯಾತ್ರೆಯಲ್ಲಿ ರಾರಾಜಿಸಲಿವೆ ಹುಬ್ಬಳ್ಳಿ ತಿರಂಗಾಗಳು - ಭಾರತ್ ಜೋಡೋ ಯಾತ್ರೆಯಲ್ಲಿ ಹುಬ್ಬಳ್ಳಿಯ ತಿರಂಗಾ
ಭಾರತ್ ಜೋಡೋ ಯಾತ್ರೆಯಲ್ಲಿ ಹುಬ್ಬಳ್ಳಿಯ ತಿರಂಗಾಗಳು ರಾರಾಜಿಸಲಿವೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸೆಪ್ಟಂಬರ್ 7 ರಿಂದ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಹುಬ್ಬಳ್ಳಿಯ ಬೆಂಗೇರಿಯಲ್ಲಿ ತಯಾರಾದ ಖಾದಿ ಧ್ವಜಗಳು ಹಾರಲಿವೆ. ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ ಮಠ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು 10 ಧ್ವಜಗಳನ್ನ ಖರೀದಿಸಿ ಕಳುಹಿಸಿ ಕೊಟ್ಟಿದ್ದಾರೆ. ಭಾರತ್ ಜೋಡೊ ಪಾದಯಾತ್ರೆ 3,571 ಕಿ.ಮೀ ನಡೆಯಲಿದೆ. ಕನ್ಯಾಕುಮಾರಿಯಿಂದ ಆರಂಭವಾಗಿ 12 ರಾಜ್ಯಗಳು ಸೇರಿದಂತ ಜಮ್ಮು ಕಾಶ್ಮೀರದವರೆಗೂ ನಡೆಯಲಿದೆ. ಕರ್ನಾಟಕದ ಚಾಮಾರಾಜ ನಗರ , ಮೈಸೂರು ನಗರ, ಗ್ರಾಮಾಂತರ , ಮಂಡ್ಯ,ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರ ನಲ್ಲೂ ಪಾದಯಾತ್ರೆ ನಡೆಯಲಿದೆ.
Last Updated : Feb 3, 2023, 8:27 PM IST