ಹುಬ್ಬಳ್ಳಿ: ಪಾದಚಾರಿಗೆ ಗುದ್ದಿದ ಬೈಕ್ ಸವಾರ.. ಇಬ್ಬರೂ ಸ್ಥಳದಲ್ಲೇ ಸಾವು - ಹುಬ್ಬಳ್ಳಿಯ ಈಶ್ವರ ನಗರ
ಹುಬ್ಬಳ್ಳಿ: ವೇಗವಾಗಿ ಬಂದ ಬೈಕ್ ಸವಾರ, ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಪಾದಚಾರಿ ಹಾಗೂ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ನಡೆದಿದೆ. ಧಾರವಾಡದಿಂದ ಹುಬ್ಬಳ್ಳಿಗೆ ವೇಗವಾಗಿ ಹೋಗುತ್ತಿದ್ದ ಸಮಯದಲ್ಲಿ ಬೈಕ್ ಸವಾರ ಎಪಿಎಂಸಿಯಿಂದ ಈಶ್ವರ ನಗದತ್ತ ಬರುತ್ತಿದ್ದ ಮಗದುಮ್ ಎಂಬ ಕಾರ್ಮಿಕನಿಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಕಾರ್ಮಿಕ ವ್ಯಕ್ತಿ ಸುಮಾರು 20 ಅಡಿ ಮುಂದೆ ಹೋಗಿ ಬಿದ್ದಿದ್ದು, ಸವಾರ ಕೂಡ ನೆಲಕ್ಕುರಳಿದ್ದಾನೆ.
ಈ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸಿ, ಮೃತದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಉತ್ತರ ಸಂಚಾರಿ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಅಪಘಾತದಲ್ಲಿ ಅಪ್ಪ ಮಗಳು ಸಾವು: ಬೈಕ್ ಹಾಗೂ ಗೂಡ್ಸ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ತಂದೆ ಹಾಗೂ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿ ತಾಯಿ- ಮಗ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಇತ್ತೀಚೆಗೆ ಕಲಬುರಗಿಯ ಹೊರವಲಯದ ಜೇವರ್ಗಿ ಹೆದ್ದಾರಿಯಲ್ಲಿ ನಡೆದಿತ್ತು.
ಇದನ್ನೂ ನೋಡಿ :Watch: ನಿಂತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದ ಸಾರಿಗೆ ಬಸ್.. ಓರ್ವ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ: ವಿಡಿಯೋ