ಈ ಅಕ್ಕಿಯನ್ನು ಜನ ಹೇಗೆ ತಿಂತಾರೆ: ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಆರೋಪದ ಬಗ್ಗೆ ಹೆಚ್ಕೆ ಪಾಟೀಲ್ ಆತಂಕ - ಆಹಾರ ಇಲಾಖೆ
ಗದಗ:ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣವಾಗಿರೋ ದೂರು ಬಂದಿದೆ. ನನಗೆ ಗ್ರಾಹಕರೊಬ್ಬರು ಅಕ್ಕಿ ತಂದು ದೂರು ನೀಡಿದ್ದಾರೆ. ಈ ಅಕ್ಕಿಯನ್ನು ಜನ ಹೇಗೆ ತಿಂತಾರೆ?, ಇದನ್ನು ನೋಡಿ ಭಯ ಪಡ್ತಾರೆ'ಎಂದು ಕಾನೂನು ಸಚಿವ ಹೆಚ್ಕೆ ಪಾಟೀಲ್ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಅಕ್ಕಿ ಪರಿಶೀಲನೆ ಮಾಡಿದ ಸಚಿವರು, ಆಹಾರ ಇಲಾಖೆಯ ಅಧಿಕಾರಿ ಗಂಗಪ್ಪ ಅವರಿಂದ ಈ ಕುರಿತು ಮಾಹಿತಿ ಪಡೆದರು. ಆದರೆ ಪ್ಲಾಸ್ಟಿಕ್ ಅಕ್ಕಿ ಅಲ್ಲ ಅಂತ ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಈ ಬಗ್ಗೆ ಹಿಂದೆಯೇ ಪರಿಶೀಲನೆ ಮಾಡಲಾಗಿದೆ. ಒಂದು ಕ್ವಿಂಟಲ್ ಅಕ್ಕಿಯಲ್ಲಿ ಒಂದು ಕೆಜಿ ಸಾರಯುಕ್ತ ಅಕ್ಕಿ ಬೆರೆಸಲಾಗಿರುತ್ತೆ. ಬೇಯಿಸುವಾಗ ಸಾರಯುಕ್ತ ಅಕ್ಕಿ ತೇಲುತ್ತೆ. ಬಳಿಕ ಅದು ಕುದಿಯುವ ವೇಳೆ ಕೆಳಗೆ ಹೋಗುತ್ತೆ. ಜನರಿಗೆ ಈ ಅಕ್ಕಿಯ ಕುರಿತು ಜನಜಾಗೃತಿ ಮಾಡುವ ಉದ್ದೇಶವಿದೆ ಎಂದು ಅಧಿಕಾರಿ ಈ ವೇಳೆ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ:Indira Canteen: ಬೆಂಗಳೂರು ನಗರದಲ್ಲಿ 250 ಇಂದಿರಾ ಕ್ಯಾಂಟೀನ್ ಪ್ರಾರಂಭ - ಸಿಎಂ ಸಿದ್ದರಾಮಯ್ಯ