ಗ್ಯಾಸ್ ಸಿಲಿಂಡರ್ ಸೋರಿಕೆ: ಹೊತ್ತಿ ಉರಿದ ಮನೆ, ತಪ್ಪಿದ ಅನಾಹುತ - ಅಗ್ನಿ ಶಾಮಕ ಸಿಬ್ಬಂದಿ
Published : Oct 27, 2023, 1:04 PM IST
ಹುಬ್ಬಳ್ಳಿ:ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಮನೆ ಹೊತ್ತಿ ಉರಿದ ಘಟನೆ ಹಳೇ ಹುಬ್ಬಳ್ಳಿ ನಗರದ ಜಂಗ್ಲಿಪೇಟದಲ್ಲಿ ಇಂದು ನಡೆದಿದೆ. ಸುಮಿತ್ರಮ್ಮ ಹೊಸೂರ ಎಂಬುವರ ಮನೆಯಲ್ಲಿ ಸಿಲಿಂಡರ್ ಗ್ಯಾಸ್ ಲೀಕ್ ಆಗಿ, ಬೆಂಕಿ ಹತ್ತಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮನೆಯ ಯಜಮಾನಿ ಸುಮಿತ್ರಮ್ಮ ಅವರು ಗ್ಯಾಸ್ ಒಲೆ ಉರಿಸಲು ಹೋದಾಗ ಸಿಲಿಂಡರ್ನಿಂದ ಗ್ಯಾಸ್ ಸೋರಿಕೆ ಆಗಿದ್ದರಿಂದ ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಸುಮಿತ್ರಮ್ಮ ಅವರು ಕೂಗಿಕೊಂಡು ಮನೆಯಿಂದ ಹೊರಗೆ ಓಡಿಕೊಂಡು ಬಂದಿದ್ದಾರೆ. ಮಹಿಳೆಯ ಚೀರಾಟ, ಕೂಗಾಟ ಕೇಳಿದ ಸ್ಥಳೀಯರು ಓಡಿ ಬಂದು ಬೆಂಕಿ ನಂದಿಸಲು ಪ್ರಯತ್ನ ಮಾಡಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಬೆಂಕಿ ಹತೋಟಿಗೆ ಬಾರದೇ ಇದ್ದಾಗ ತಕ್ಷಣ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಮನೆಯ ಒಂದು ಭಾಗ ಸುಟ್ಟು ಕರಕಲಾಗಿದೆ.
ಇದನ್ನೂ ನೋಡಿ :ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: 60ಕ್ಕೂ ಹೆಚ್ಚು ಟ್ಯಾಂಕರ್ಗಳು ಬೆಂಕಿಗಾಹುತಿ