ಹುಬ್ಬಳ್ಳಿಯಲ್ಲಿ ಆಕಾಶ ಬುಟ್ಟಿ ಅವಾಂತರ: ಧಗಧಗನೆ ಹೊತ್ತಿ ಉರಿದ ಮನೆ - House catch the fire in hubli
ಹುಬ್ಬಳ್ಳಿ: ಆಕಾಶ ಬುಟ್ಟಿ ಬಿದ್ದ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ಘಂಟಿಕೇರಿ ಓಣಿಯ ರಾಘವೇಂದ್ರ ಮಠದ ಬಳಿಯಲ್ಲಿ ನಡೆದಿದೆ. ಶಿವರಾಜ ತಾಳಿಕೋಟಿ ಎಂಬುವರ ಮನೆಗೆ ಆಕಾಶ ಬುಟ್ಟಿ ಬಿದ್ದಿದ್ದು, ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
Last Updated : Feb 3, 2023, 8:31 PM IST