ಕರ್ನಾಟಕ

karnataka

ಕಳೆದು ಹೋಗಿದ್ದ ಫೋನ್ ಹುಡುಕಿಕೊಡಲು ಮಹಿಳೆಗೆ ನೆರವಾದ ಹೋಟೆಲ್​ ಸಿಬ್ಬಂದಿ..ಕೊನೆಗೂ ಸಿಕ್ಕ ದುಬಾರಿ ಬೆಲೆಯ ಫೋನ್​

ETV Bharat / videos

ಕಳೆದು ಹೋಗಿದ್ದ ಫೋನ್ ಹುಡುಕಿಕೊಡಲು ಹುಬ್ಬಳ್ಳಿ ಮಹಿಳೆಗೆ ನೆರವಾದ ಹೋಟೆಲ್​ ಸಿಬ್ಬಂದಿ.. ಕೊನೆಗೂ ಸಿಕ್ಕ ದುಬಾರಿ ಫೋನ್​ - ಹುಡುಕಿಕೊಡಲು ಮಹಿಳೆಗೆ ನೆರವಾದ ಹೋಟೆಲ್​ ಸಿಬ್ಬಂದಿ

By

Published : Feb 14, 2023, 9:46 PM IST

ಗುಲ್ಮಾರ್ಗ್ (ಜಮ್ಮು ಮತ್ತು ಕಾಶ್ಮೀರ):ಪ್ರಸಿದ್ಧ ಪ್ರವಾಸಿ ತಾಣವಾದ ಗುಲ್ಮಾರ್ಗ್‌ನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನಲ್ಲಿ ಕ್ರೀಡಾಪಟುಗಳು ಪದಕಗಳನ್ನು ಗೆಲ್ಲಲು ವಿವಿಧ  ರಾಜ್ಯ, ಕೇಂದ್ರಾಡಳಿತ ಪ್ರದೇಶವನ್ನು ಆಗಮಿಸಿರುವುದು ಒಂದು ಕಡೆಯಾದರೆ. ಪ್ರವಾಸಿಗರು ಕಾಶ್ಮೀರದ ನೈಸರ್ಗಿಕ ಸೌಂದರ್ಯ ಸವಿಯಲು ಗುಲ್ಮಾರ್ಗ್​ಗೆ ಆಗಮಿಸುತ್ತಿದ್ದಾರೆ. ಇದರ ನಡುವೆ ಪ್ರವಾಸಕ್ಕೆ ತೆರಳಿದ್ದ ಹುಬ್ಬಳ್ಳಿಯ ಮಹಿಳೆಯೊಬ್ಬರು ಗುಲ್ಮಾರ್ಗ್‌ನಲ್ಲಿ ತಮ್ಮ ದುಬಾರಿ ಬೆಲೆಯ ಫೋನ್ ಕಳೆದುಕೊಂಡಿದ್ದಾರೆ.

ಫೋನ್​ ಕಳೆದುಕೊಂಡ ಮಹಿಳೆ ನೀತು ಹಬೀಬ್, ತನ್ನ ಪತಿ ಮತ್ತು ಸ್ನೇಹಿತರೊಡನೆ ಸೇರಿ ಎಷ್ಟೇ ಹುಡುಕಿದರು 1.5 ಲಕ್ಷ ಬೆಲೆ ಬಾಳುವ ಮೊಬೈಲ್ ಪತ್ತೆಯಾಗಿರಲಿಲ್ಲ. ಇದರಿಂದ ನಿರಾಸೆಗೊಂಡು ತಾವು ತಂಗಿದ್ದ ಹೋಟೆಲ್​ಗೆ ಹಿಂತಿರುಗಿದ್ದಾರೆ. ಈ ವಿಷಯವನ್ನು ತಮ್ಮ ಹೋಟೆಲ್ ಮ್ಯಾನೇಜರ್​ಗೆ ತಿಳಿಸಿದಾಗ. ಅವರು ಫೋನ್​ ಹುಡುಕಲು ನೆರವಾಗಲು ಇಬ್ಬರು ಸಿಬ್ಬಂದಿಯನ್ನು ಅವರೊಡನೆ ಕಳುಹಿಸಿದ್ದರು. ಸಾಕಷ್ಟು ಪ್ರಯತ್ನದ ನಂತರ ಮಹಿಳೆ ಸಂಚಾರ ಮಾಡಿದ್ದ ಕಾರಿನ ಹಿಂಬದಿಯ ಸೀಟಿನಡಿ ಫೋನ್‌ ಪತ್ತೆಯಾಗಿದೆ.  

ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ನೀತು ಹಬೀಬ್, ನಾನು ಮೊದಲು ಕಾಶ್ಮೀರದ ಬಗ್ಗೆ ಕೇಳಿದ್ದೆ, ಆದರೆ ಇಂದು ಕಾಶ್ಮೀರಿಗಳು ಎಷ್ಟು ಆತಿಥ್ಯ ಮತ್ತು ಮಾನವೀಯತೆ ಹೊಂದಿರುವ ಜನರು ಎಂಬುದನ್ನು ಕಣ್ಣಾರೆ ಕಂಡೆ ಎಂದಿದ್ದಾರೆ. ಹೋಟೆಲ್ ರಾಯಲ್ ಕ್ಯಾಸಲ್‌ನ ಮ್ಯಾನೇಜರ್ ರಾಹುಲ್ ರೈನಾ ಅವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಫೋನ್ ಹುಡುಕಲು ನನ್ನೊಂದಿಗೆ ಇಬ್ಬರು ಸಿಬ್ಬಂದಿಯನ್ನು ಕಳುಹಿಸುವ ಮೂಲಕ ಅವರು ನನಗೆ ಸಹಾಯ ಮಾಡಿದರು, ಇಬ್ಬರು ಸಿಬ್ಬಂದಿಯ ಅವಿರತ ಪ್ರಯತ್ನದಿಂದಾಗಿ ಫೋನ್​ ಸಿಕ್ಕಿತು, ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:Watch.. ದೇಶದ ಆಂತರಿಕ ಭದ್ರತೆಯ ಬೆನ್ನೆಲುಬಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಆರ್​ಪಿಎಫ್​​ ಯೋಧರು

ABOUT THE AUTHOR

...view details