ವಾರಣಾಸಿಯಲ್ಲಿ ಬಿದ್ದ ಹಾಟ್ ಏರ್ ಬಲೂನ್: ವಿಡಿಯೋ ವೈರಲ್
ವಾರಣಾಸಿ(ಉತ್ತರ ಪದೇಶ): ಕಾಶಿಯಲ್ಲಿ ನಡೆದ ಹಾಟ್ ಏರ್ ಬಲೂನ್ ಉತ್ಸವದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಟ್ ಏರ್ ಬಲೂನ್ ಸಿಗ್ರಾ ಪ್ರದೇಶದಲ್ಲಿ ಇಳಿಯುವುದನ್ನು ಕಾಣಬಹುದು. ಜನನಿಬಿಡ ಪ್ರದೇಶಕ್ಕೆ ಏಕಾಏಕಿ ಬಲೂನ್ ಬಂದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಬಲೂನ್ ಕೆಳಗೆ ಬರುತ್ತಿರುವುದನ್ನು ನೋಡಿ ಮಕ್ಕಳು ಕೂಗಲಾರಂಭಿಸಿದರು. ಈ ವೇಳೆ ಇಡೀ ಪ್ರದೇಶ ಜೈ ಶ್ರೀರಾಮ್, ಹರ್ ಹರ್ ಮಹಾದೇವ್ ಘೋಷಣೆಯೊಂದಿಗೆ ಪ್ರತಿಧ್ವನಿಸಿತು.
ವಾರಣಾಸಿಯ ಸಿಗ್ರಾದಲ್ಲಿರುವ ಲಜಪತ್ ನಗರದ ಉದ್ಯಾನವನದಲ್ಲಿ ಬಲೂನ್ ಬಿದ್ದಿದೆ ಎಂದು ಹೇಳಲಾಗುತ್ತಿದೆ. ದೊಡ್ಡ ಬಲೂನ್ ನೋಡಿ ಮಕ್ಕಳು ಸಂತೋಷದಿಂದ ಕೂಗಾಡುತ್ತಿರುವುದು ಕಂಡು ಬಂದಿದೆ. ಜನವರಿ 17 ರಿಂದ 20 ರವರೆಗೆ ವಾರಣಾಸಿಯಲ್ಲಿ 4 ದಿನಗಳ ಹಾಟ್ ಏರ್ ಬಲೂನ್ ಉತ್ಸವವನ್ನು ಆಯೋಜಿಸಲಾಗಿತ್ತು. ವಾರಣಾಸಿಯಲ್ಲಿ ಪ್ರತಿದಿನ 10 ಹಾಟ್ ಏರ್ ಬಲೂನ್ಗಳು ಹಾರಾಡುತ್ತಿದ್ದವು. 100ಕ್ಕೂ ಹೆಚ್ಚು ಅತಿಥಿಗಳು ಈ ಬಲೂನ್ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಕಾಶಿಯಲ್ಲಿ ಪ್ರವಾಸೋದ್ಯಮ ಇಲಾಖೆ ಈ ಕಾರ್ಯಕ್ರಮ ಆಯೋಜಿಸಿತ್ತು.