ಅಪಘಾತಕ್ಕೀಡಾಗಿ ಶಾಲೆಯ ಗೋಡೆ, ಮರವೇರಿದ ಕಾರು: ವಿಡಿಯೋ - ಪಂಜಾಬ್ ಕಾರು ಅಪಘಾತ
ವೇಗವಾಗಿ ಬರುತ್ತಿದ್ದ ಕಾರು ಎದುರಿಗೆ ಬಂದ ಪಾದಚಾರಿಯನ್ನು ತಪ್ಪಿಸಲು ಹೋಗಿ ಶಾಲೆಯ ಗೋಡೆಗೆ ಗುದ್ದಿ, ಪಕ್ಕದಲ್ಲಿದ್ದ ಮರದ ಮೇಲೆ ಹಾರಿ ಸಿಲುಕಿಕೊಂಡ ಘಟನೆ ಪಂಜಾಬ್ನ ಮೋಗಾದಲ್ಲಿ ಇಂದು ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿ ವೇಗದಲ್ಲಿ ಕಾರು ಬ್ರೇಕ್ ಹಾಕಿದ ರಭಸಕ್ಕೆ ಪಲ್ಟಿ ಹೊಡೆದು ಗೋಡೆಗೆ ಗುದ್ದಿ ಮೇಲಕ್ಕೆ ಹಾರಿ, ಮರದ ಟೊಂಗೆಯೊಳಗೆ ಸಿಲುಕಿದೆ. ಈ ವಿದ್ಯಮಾನ ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Last Updated : Feb 3, 2023, 8:30 PM IST