ಕರ್ನಾಟಕ

karnataka

ಆಕಸ್ಮಿಕ ಅಗ್ನಿ ದುರಂತ..ಸುಟ್ಟು ಭಸ್ಮವಾದ ಮನೆ

ETV Bharat / videos

ಆಕಸ್ಮಿಕ ಅಗ್ನಿ ದುರಂತ.. ಸುಟ್ಟು ಭಸ್ಮವಾದ ಮನೆ: Video - ಕೊಪ್ಪಳ

By

Published : Jun 27, 2023, 7:17 AM IST

ಕೊಪ್ಪಳ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮನೆಯೊಂದು ಸುಟ್ಟು ಭಸ್ಮವಾಗಿದೆ. ಕುಷ್ಟಗಿ ತಾಲೂಕಿನ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಯರಗೇರಾ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ದುರಂತ ಸಂಭವಿಸಿದೆ. ಯರಗೇರಾ ಗ್ರಾಮದ ದೊಡ್ಡಪ್ಪ ಗಚ್ಚಿನಮನಿ ಎಂಬುವವರಿಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದೆ. ಅದೃಷ್ಠವಶಾತ್ ಬೆಂಕಿ ಹೊತ್ತಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಇದರಿಂದ ದೊಡ್ಡ ದುರಂತವೊಂದು ತಪ್ಪಿದೆ. 

ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್: 250 ಗ್ರಾಂ ಚಿನ್ನ, ಮನೆ ಸಾಮಗ್ರಿ ಸುಟ್ಟು ಭಸ್ಮ

ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸಪಟ್ಟರೂ  ಸಾಧ್ಯವಾಗಲಿಲ್ಲ. ಬಳಿಕ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಅಗ್ನಿ ಅವಘಡದಲ್ಲಿ ಮನೆಯಲ್ಲಿದ್ದ 4 ಲಕ್ಷ ರೂ. ನಗದು, ನಾಲ್ಕು ತೊಲೆ ಚಿನ್ನಾಭರಣ, ಮನೆಯಲ್ಲಿದ್ದ ದವಸ ಧಾನ್ಯಗಳು ಹಾಗೂ ದಿನ ಬಳಕೆಯ ವಸ್ತುಗಳು ಸುಟ್ಟು ಭಸ್ಮವಾಗಿವೆ. 

ಇದನ್ನೂ ಓದಿ:ಬೆಂಕಿ, ಗುಂಡಿನ ದಾಳಿ, ಚಾಕು ಇರಿತ.. ಜೈಲಿನಲ್ಲಿ 26 ಮಹಿಳೆಯರು ಬೆಂಕಿಗಾಹುತಿ ಸೇರಿ 41 ಜನರ ಸಾವು!

ABOUT THE AUTHOR

...view details