ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಂಗಪಂಚಮಿ ಸಂಭ್ರಮ: ಕುಣಿದು ಕುಪ್ಪಳಿಸಿದ ಯುವಕ ಯುವತಿಯರು.. - kannada top news
ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ರಂಗ ಪಂಚಮಿ ಸಂಭ್ರಮ ಜೋರಾಗಿತ್ತು. ಜನರು ಬಣ್ಣದಲ್ಲಿ ಮಿಂದೆದ್ದರು. ನಗರದ ಚೆನ್ನಮ್ಮ ವೃತ್ತ, ಮೇದಾರ ಓಣಿ, ಬಾನಿ ಓಣಿ, ಕ್ವಾಯಿನ್ ರೋಡ್ ಸೇರಿದಂತೆ ಹಲವು ಕಡೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹೋಳಿ ಆಚರಿಸಿ ಸಂಭ್ರಮಿಸಿದರು. ನಗರದ ವಿವಿಧೆಡೆಯೂ ಹೋಳಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಮೇದಾರ ಓಣಿಯಲ್ಲಿ ರಂಗ ಪಂಚಮಿ ಸಂಭ್ರಮ ದುಪ್ಪಟ್ಟಾಗಿತ್ತು. ಬೃಹತ್ ಗಾತ್ರದ ಕಾಮಣ್ಣ ಮೂರ್ತಿ ಬಳಿ ಜನ ಹುಚ್ಚೆದ್ದು ಕುಣಿದರು. ಮಕ್ಕಳು, ಮಹಿಳೆಯರು, ಯುವಕರ ಜೋಶ್ ಜೋರಾಗಿತ್ತು. ಕೃತಕ ಮಳೆ ಸುರಿಸಿ, ಬಣ್ಣ ಎರಚಿ ಸಂಭ್ರಮಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಗದಗದಲ್ಲಿ ರಂಗಪಂಚಮಿ ಸಂಭ್ರಮ:ಗದಗಬೆಟಗೇರಿ ಅವಳಿ ನಗರದಲ್ಲಿ ಶನಿವಾರದಂದು ರಂಗಪಂಚಮಿ ಪ್ರಯುಕ್ತ ಅದ್ಧೂರಿಯಾಗಿ ರಂಗುರಂಗಿನ ಹೋಳಿ ಹಬ್ಬವನ್ನು ಆಚರಿಸಲಾಯಿತು. ನಗರದ ವಿವಿಧ ಬಡಾವಣೆಯಲ್ಲಿ ಮಹಿಳೆಯರು, ಮಕ್ಕಳು, ಯುವಕರು, ಯುವತಿಯರು ಒಬ್ಬರಿಗೊಬ್ಬರು ಬಣ್ಣ ಎರಚುವ ಮೂಲಕ ರಂಗಿನ ಹಬ್ಬದ ಬಣ್ಣದಲ್ಲಿ ಮಿಂದೆದ್ದರು. ಈ ಹಬ್ಬ ಧಾರ್ಮಿಕತೆಗೆ ಉತ್ತಮ ತಳಹದಿಯಾಗಿ ಎಲ್ಲಾ ಜಾತಿ - ಜನಾಂಗದವರನ್ನು ಖುಷಿಪಡಿಸುವ ಹಬ್ಬವಾಗಿದ್ದು, ಅವಳಿ ನಗರದಲ್ಲಿ ಹೋಳಿ ಹಬ್ಬದ ಸಡಗರ ಜೋರಾಗಿತ್ತು. ಇನ್ನು ಹಲವು ಡಿಜೆಗೆ ಸೌಂಡ್ಗೆ ಸಖತ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.
ಇದನ್ನೂ ಓದಿ:ಪ್ರಧಾನಿ ಉಡುಗೊರೆಗೆ ಸಿದ್ಧವಾಯಿತು ಜಗತ್ಪ್ರಸಿದ್ಧ ಕಲಘಟಗಿ ತೊಟ್ಟಿಲು