ಆರ್‌ಎಸ್‌ಎಸ್ ರ‍್ಯಾಲಿಯಲ್ಲಿ ಹಿಂದೂ ಮುನ್ನಾನಿ ಜಿಲ್ಲಾಧ್ಯಕ್ಷ ಸಾವು - ETV Bharat kannada News
ತೂತುಕುಡಿ (ತಮಿಳುನಾಡಿ) : ಟುಟಿಕೋರಿನ್ ಜಿಲ್ಲೆ ಶ್ರೀವೈಕುಂಟಂನಲ್ಲಿ ನಡೆದ ಆರ್‌ಎಸ್‌ಎಸ್ ರ‍್ಯಾಲಿಯಲ್ಲಿ ಮೂರ್ಛೆ ತಪ್ಪಿ ಬಿದ್ದ ನಜರೆತ್‌ನ ಹಿಂದೂ ಮುನ್ನಾನಿ ತೂತುಕುಡಿ ದಕ್ಷಿಣ ಜಿಲ್ಲಾಧ್ಯಕ್ಷ ಮೃತಪಟ್ಟಿರುವ ಘಟನೆ ನಡೆದಿದೆ. ವೆಟ್ಟುಂಪೆರುಮಾಳ್ (ವಯಸ್ಸು 54) ಮೃತರು. ನಿನ್ನೆ(ಭಾನುವಾರ) ತಮಿಳುನಾಡಿನ 45 ಕಡೆ ಪೊಲೀಸ್ ಬಂದೋಬಸ್ತ್ ನಡುವೆ ಆರ್‌ಎಸ್‌ಎಸ್ ರ‍್ಯಾಲಿಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಈ ರ‍್ಯಾಲಿಯಲ್ಲಿ ಹಿಂದೂ ಮುನ್ನಾನಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಪಕ್ಷದಿಂದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ರ‍್ಯಾಲಿ ವೇಳೆ ವೆಟ್ಟುಂಪೆರುಮಾಳ್ ಅವರು ಇದ್ದಕ್ಕಿದಂತೆ ಮೂರ್ಛೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಶ್ರೀವೈಕುಂಟಂ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆ ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ವೆಟ್ಟುಂಪೆರುಮಾಳ್ ಅವರನ್ನು ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದರು. ಇನ್ನು ಈ ಸಂಬಂಧ ಶ್ರೀವೈಕುಂಟಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ :ಪಂಜಾಬ್ ಬಿಜೆಪಿ ಮುಖಂಡನ ಮುಖಕ್ಕೆ ಗುಂಡು ಹಾರಿಸಿದ ದುಷ್ಕರ್ಮಿಗಳು