ಎನ್‌ಸಿಸಿ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆ.. ಇದು ಖಂಡನೀಯ, ಕ್ರಮ ಕೈಗೊಳ್ಳುತ್ತೇವೆ : ಪ್ರಾಂಶುಪಾಲರ ಭರವಸೆ - ತರಬೇತಿ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಹಲ್ಲೆ
ಥಾಣೆ, ಮಹಾರಾಷ್ಟ್ರ:ಬಾಂದೋಡ್ಕರ್, ಬೇಡಕರ್ ಮತ್ತು ಪಾಲಿಟೆಕ್ನಿಕ್ ಎಂಬ ಮೂರು ವಿಭಾಗದ ವಿದ್ಯಾರ್ಥಿಗಳಿಗೆ ಜೋಶಿ ಬೇಡಕರ್ ಕಾಲೇಜಿನ ಆವರಣದಲ್ಲಿ ಜಂಟಿ ಎನ್‌ಸಿಸಿ ತರಬೇತಿ ವೇಳೆ ಕಿರುಕುಳ ನೀಡಲಾಗಿರುವ ವಿಡಿಯೋವೊಂದು ವೈರಲ್ ಆಗ್ತಿದೆ. ತರಬೇತಿ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಲಾಗುತ್ತಿದೆ. ತರಬೇತಿ ವೇಳೆ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಇಂತಹ ಕಠಿಣ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.
ವಿಡಿಯೋದಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಈ ಶಿಕ್ಷೆ ಅತ್ಯಂತ ಅಮಾನವೀಯವಾಗಿದ್ದು, ನಗರದಲ್ಲಿ ಸಂಚಲನ ಮೂಡಿಸಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಎನ್‌ಸಿಸಿ ಬಗ್ಗೆ ಭಯ ಆವರಿಸಿದ್ದು, ಹಲವರು ವಿದ್ಯಾರ್ಥಿಗಳು ಎನ್‌ಸಿಸಿ ಬೇಡ ಎನ್ನುತ್ತಿದ್ದಾರೆ. ಆದರೆ, ಈ ಬಗ್ಗೆ ವಿದ್ಯಾರ್ಥಿಗಳು ಸ್ವಲ್ಪವೂ ಆಲೋಚಿಸಬಾರದು. ಈ ರೀತಿಯ ವರ್ತನೆಯನ್ನು ನಾವು ಸಹಿಸುವುದಿಲ್ಲ ಎಂದು ಜೋಶಿ ಬೇಡಕರ ಕಾಲೇಜು ಪ್ರಾಂಶುಪಾಲೆ ಸುಚಿತ್ರಾ ನಾಯ್ಕ್ ಹೇಳಿದ್ದಾರೆ.
ಅವರು ಶಿಕ್ಷಕರಲ್ಲ.. ಆದರೆ ಅವರು ಹಿರಿಯ ವಿದ್ಯಾರ್ಥಿಗಳು. ಆದರೆ ಇದು ತುಂಬಾ ಅವಮಾನೀಯ. ಘಟನೆ ಖಂಡನೀಯವಾಗಿದ್ದು, ಆ ವಿದ್ಯಾರ್ಥಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ. ಮುಂದೆ ಇಂತಹ ಘಟನೆ ನಡೆಯದಂತೆ ಕೂಡಲೇ ಸಮಿತಿ ರಚಿಸುತ್ತಿದ್ದೇವೆ. ಇಂತಹ ಘಟನೆಗಳು ನಡೆದರೆ ವಿದ್ಯಾರ್ಥಿಗಳು ನಿರ್ಭಯವಾಗಿ ಬಂದು ನಮ್ಮನ್ನು ಭೇಟಿ ಮಾಡಿ, ಎನ್‌ಸಿಸಿ ತೊರೆಯುವ ಯೋಚನೆಯನ್ನೂ ಮಾಡಬೇಡಿ ಎಂದು ಸುಚಿತ್ರಾ ನಾಯ್ಕ್ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.
ಸೇನೆಯ ರೀತಿಯಲ್ಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ತಪ್ಪಿದಲ್ಲಿ ಸೇನೆಯಲ್ಲಿರುವ ರೀತಿಯಲ್ಲೇ ಶಿಕ್ಷೆ ನೀಡಲಾಗುತ್ತದೆ. ಕೆಲವೊಮ್ಮೆ ಗೊತ್ತಿದ್ದೂ ಸಿಟ್ಟಿನಿಂದ ಶಿಕ್ಷೆ ನೀಡುತ್ತಿದ್ದಾರೆ ಎಂದು ಕೆಲ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಇಂತಹ ಘಟನೆಗಳನ್ನು ತಡೆಯಬೇಕಾದರೆ ಕಾಲೇಜುಗಳ ಮೇಲೆ ಸರ್ಕಾರದ ನಿಯಂತ್ರಣ ಅಗತ್ಯ ಎನ್ನುತ್ತಾರೆ ಕೆಲ ವಿದ್ಯಾರ್ಥಿಗಳು.
ಓದಿ:Army Recruitment: ಎನ್‌ಸಿಸಿ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯಲ್ಲಿ ವಿಶೇಷ ನೇಮಕಾತಿ