ಕರ್ನಾಟಕ

karnataka

ಯೋಧರು

ETV Bharat / videos

Watch.. ಪೂಂಚ್​ನಲ್ಲಿ ಶಸ್ತ್ರಾಸ್ತ್ರದೊಂದಿಗೆ ಗಸ್ತು ತಿರುಗುತ್ತಿರುವ ಯೋಧರು - Potha Surankote belt of Poonch district

By

Published : Aug 15, 2023, 12:05 PM IST

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ದೇಶದೆಲ್ಲೆಡೆ ಶಾಂತಿಯುತವಾಗಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ, ನಾವಿಲ್ಲಿ ಭಯಮುಕ್ತರಾಗಿ ಉಸಿರಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ತಮ್ಮ ಪ್ರಾಣ ಒತ್ತೆ ಇಟ್ಟು ಶಸ್ತ್ರಾಸ್ತ್ರ ಸಜ್ಜಿತರಾಗಿ ದೇಶದ ಗಡಿ ಕಾಯುತ್ತಿರುವ ನಮ್ಮ ಹೆಮ್ಮೆಯ ಯೋಧರು.ಇಂದುಸ್ವಾತಂತ್ರ್ಯ ದಿನವನ್ನು ಶಾಂತಿಯುತವಾಗಿ ಆಚರಿಸಲು ಪೂಂಚ್ ಜಿಲ್ಲೆಯ ಪೋಥಾ - ಸುರನ್‌ಕೋಟೆ ಬೆಲ್ಟ್‌ನಲ್ಲಿ ಭಾರತೀಯ ಯೋಧರು ಡ್ರೋನ್‌ಗಳು ಮತ್ತು ಇತರ ಕಣ್ಗಾವಲು ಉಪಕರಣಗಳೊಂದಿಗೆ ಗಸ್ತು ತಿರುಗುತ್ತಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ತಡೆಗಟ್ಟಲು ತಮ್ಮ ಕಣ್ಣನ್ನು ಒಂದು ಕ್ಷಣವು ಮುಚ್ಚದೇ ಎಚ್ಚರವಹಿಸಿ ತಾಯ್ನಾಡನ್ನು ನಮ್ಮ ಸೈನ್ಯ ರಕ್ಷಿಸುತ್ತಿದೆ.

ನಿಮಗೆ ತಿಳಿದಿರುವಂತೆ ಕಳೆದ ತಿಂಗಳಿನಿಂದ ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಮತ್ತು ರಾಜೌರಿ ಪ್ರದೇಶಗಳು ನುಸುಳುಕೋರರಿಂದ ಹಲವು ದಾಳಿಗಳಿಗೆ ಸಾಕ್ಷಿಯಾಗಿದೆ. ಹೀಗಾಗಿ ಭದ್ರತಾ ಪಡೆ ದೇಶದ ಗಡಿಯನ್ನು ಭದ್ರಪಡಿಸುವಲ್ಲಿ ತಾಂತ್ರಿಕ ಪ್ರಗತಿ ಮತ್ತು ಹೊಸ ತಂತ್ರಗಳನ್ನು ಅಳವಡಿಸಿಕೊಂಡಿದೆ. ಇದುವರೆಗೆ ಭಾರತ ಗಡಿ ದಾಟಿ ಬರಲು ಪ್ರಯತ್ನಿಸಿದ ಎಲ್ಲ ಉಗ್ರರನ್ನು ಸೈನಿಕರು ಹೊಡೆದುರುಳಿಸಿದ್ದಾರೆ. ಕಡಿಮೆ ತಾಪಮಾನವಿರುವ ಗಡಿ ಪ್ರದೇಶದಲ್ಲಿ ಯೋಧರು ಕಾರ್ಯ ನಿರ್ವಹಿಸುವ ದೃಶ್ಯ ನೋಡಿದರೆ ಒಂದು ಬಾರಿ ರಾಷ್ಟ್ರ ಧ್ವಜಕ್ಕೆ ಸೆಲ್ಯೂಟ್​ ಹೊಡೆದಂತೆ, ಅವರಿಗೂ ಗೌರವ ಅರ್ಪಿಸುವ ಹೆಮ್ಮೆಯ ಭಾವನೆ ಮನಸಲ್ಲಿ ಬಂದು ಬಿಡುತ್ತದೆ. ಜೀವದ ಹಂಗು ತೊರೆದು ಭಾರತಾಂಬೆಯ ರಕ್ಷಣೆಗಾಗಿ ರಾತ್ರಿ ಹಗಲೆನ್ನೆದೆ ಗಡಿ ಕಾಯುತ್ತಿರುವ ನಮ್ಮ ಸೈನಿಕರಿಗೆ ಭಾರತೀಯರ ಪರವಾಗಿ ಸ್ವಾತಂತ್ರೋತ್ಸವದ ಶುಭಾಶಯಗಳು.

ಇದನ್ನೂ ಓದಿ:ಸ್ವಾತಂತ್ರ್ಯ ದಿನಕ್ಕೂ ಮುನ್ನ ಪಾಕ್​ ನುಸುಳುಕೋರನ ಯತ್ನ ವಿಫಲ.. ಶಂಕಿತನನ್ನು ಹೊಡೆದುರುಳಿಸಿದ ಸೇನೆ

ABOUT THE AUTHOR

...view details