ಕರ್ನಾಟಕ

karnataka

ಹಿಮಾಚಲ ಪ್ರದೇಶದಲ್ಲಿ ಹಿಮ ತೆರವು ಕಾರ್ಯಾಚರಣೆ

ETV Bharat / videos

ಹಿಮಾಚಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟ ಹಿಮ: ಜೆಸಿಬಿ ಬಳಸಿ ತೆರವು- ವಿಡಿಯೋ - ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಹಿಮ

By

Published : May 18, 2023, 8:04 AM IST

ಹಿಮಾಚಲ ಪ್ರದೇಶ : ಇಲ್ಲಿನ ಲಾಹೌಲ್ ಸ್ಪಿತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಹಿಮ ಆವರಿಸಿದೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿ ಆರ್​ ಒ) ವತಿಯಿಂದ ಹಿಮ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಲಾಹೌಲ್ ಸ್ಪಿತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಮ ಆವರಿಸಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಪರಿಣಾಮ, ಜೆಸಿಬಿ ಬಳಸಿ ಗಡಿ ರಸ್ತೆಗಳ ಸಂಸ್ಥೆ ಹಿಮ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಎತ್ತ ನೋಡಿದರೂ ಮೀಟರ್‌ಗಟ್ಟಲೆ ಎತ್ತರದಲ್ಲಿ ಹಿಮ ಬಿದ್ದಿದೆ. ಹಾಗೆಯೇ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಕಡಿಮೆ ಇದೆ.  

ಇದನ್ನೂ ಓದಿ :ಎಲ್ಲೆಡೆ ಹಿಮದ ರಾಶಿ .. ಕಾಶ್ಮೀರ ರಸ್ತೆಯಲ್ಲಿ ಮಂಜುಗಡ್ಡೆ ತೆರವು ಕಾರ್ಯಾಚರಣೆ : ವಿಡಿಯೋ

ಕಳೆದ ಏಪ್ರಿಲ್​ 4 ರಂದು ಸಿಕ್ಕಿಂನಲ್ಲಿ ಹಿಮ ಕುಸಿತ ಉಂಟಾಗಿ ಆರು ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು. ಗ್ಯಾಂಗ್ಟಕ್‌ನಿಂದ ನಾಥುಲಾಗೆ ಸಂಪರ್ಕ ಕಲ್ಪಿಸುವ ಜವಾಹರಲಾಲ್ ನೆಹರು ರಸ್ತೆಯ 15ನೇ ಮೈಲಿನಲ್ಲಿ ಘಟನೆ ನಡೆದಿತ್ತು.  

ಇದನ್ನೂ ಓದಿ : ಮನಾಲಿಯಲ್ಲಿ ಸಿಲುಕಿದ ಐನೂರಕ್ಕೂ ಹೆಚ್ಚು ಪ್ರವಾಸಿಗರು : ಜಾರಿಯಲ್ಲಿದೆ ಹಿಮ ತೆರವು ಕಾರ್ಯಾಚರಣೆ

ABOUT THE AUTHOR

...view details