ಹುಬ್ಬಳ್ಳಿಯಲ್ಲಿ ಹೈ ಅಲರ್ಟ್ ಘೋಷಣೆ: ಮುಂಜಾಗ್ರತಾ ಕ್ರಮವಾಗಿ ವಿವಿಧೆಡೆ ಪರಿಶೀಲನೆ - ಹೈ ಅಲರ್ಟ್
ಹುಬ್ಬಳ್ಳಿ:ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರನ್ನು ಬಂಧನ ಮಾಡಿದ ಬೆನ್ನಲ್ಲೇ ವಿಶ್ವದ ಅತಿದೊಡ್ಡ ಪ್ಲಾಟ್ ಫಾರಂ ಹೊಂದಿರುವ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯ ರಾಜಧಾನಿಯಲ್ಲಿ ಐವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದು, ಈ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಡಾಗ್ ಸ್ಕ್ವಾಡ್ನಿಂದ ಪರಿಶೀಲನೆ ನಡೆಸುವ ಮೂಲಕ ಹೈ ಅಲರ್ಟ್ ಘೋಷಿಸಲಾಗಿದೆ. ಹುಬ್ಬಳ್ಳಿಯ ಜನನಿಬಿಡ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು. ಈಗಾಗಲೇ ಶ್ವಾನ ದಳದಿಂದ ಪ್ರಯಾಣಿಕರ ಬ್ಯಾಗ್ ಹಾಗೂ ಇತರ ವಸ್ತುಗಳನ್ನು ಪರಿಶೀಲನೆ ನಡೆಸಲಾಯಿತು.
ಹುಬ್ಬಳ್ಳಿಯಲ್ಲಿ ಹೈ ಅಲರ್ಟ್ ಘೋಷಣೆ ಹಿನ್ನೆಲೆ ಇಲ್ಲಿನ ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆಗಳು ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ತಪಾಸಣೆ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹಲವು ಕಡೆಗಳಲ್ಲಿ ತಪಾಸಣೆ ನಡೆಲಾಯಿತು.
ಬೆಂಗಳೂರಿನ ಸ್ಥಳೀಯರಲ್ಲಿ ಆತಂಕ:ಜನನಿಬಿಡ ಪ್ರದೇಶಗಳಲ್ಲಿ ಶಂಕಿತ ಭಯೋತ್ಪಾದಕರು ಉಗ್ರ ಕೃತ್ಯವೆಸಗಲು ಸಂಗ್ರಹಿಸಿ ಬಚ್ಚಿಟ್ಟಿದ್ದ ನಾಲ್ಕು ಜೀವಂತ ಹ್ಯಾಂಡ್ ಗ್ರೆನೇಡ್ ಬೆಂಗಳೂರು ನಗರದಲ್ಲಿ ಇದೇ ಮೊದಲು ಪತ್ತೆಯಾಗಿದೆ. ಇದರಿಂದ ಇಲ್ಲಿನ ಸ್ಥಳೀಯರಲ್ಲಿ ಆತಂಕ ಮೂಡಿದೆ. ಪ್ರಕರಣದ 5ನೇ ಆರೋಪಿ ಜಾಯೇದ್ ತಬ್ರೆಸ್ನ ಕೊಡಿಗೆಹಳ್ಳಿಯ ಮನೆಯ ಅಲ್ಮೇರಾದಲ್ಲಿ ಬಚ್ಚಿಟ್ಟಿದ್ದ ನಾಲ್ಕು ಹ್ಯಾಂಡ್ ಗ್ರೆನೇಡ್ಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಶಂಕಿತ ಉಗ್ರನ ಮನೆಯಲ್ಲಿ ಪತ್ತೆಯಾದವು 4 ಹ್ಯಾಂಡ್ ಗ್ರೆನೇಡ್: ರಾಜಧಾನಿಯಲ್ಲಿ ದೊರಕಿದ್ದು ಇದೇ ಮೊದಲು!