ನಾಡಿನತ್ತ ಕಾಡಾನೆಗಳ ಸವಾರಿ: ಚಾಮರಾಜನಗರ ಗಡಿ ಗ್ರಾಮಗಳಲ್ಲಿ ಬೆಳೆನಾಶದ ಭೀತಿ - ಕಾಡಾನೆಗಳ ಹಿಂಡು
Published : Jan 11, 2024, 12:10 PM IST
ಚಾಮರಾಜನಗರ: ಕಾಡಾನೆಗಳ ಹಿಂಡು ಚಾಮರಾಜನಗರದ ಗಡಿಭಾಗ ತಮಿಳುನಾಡಿನ ಅರಳವಾಡಿಯಲ್ಲಿ ಬೀಡುಬಿಟ್ಟಿವೆ. ಬುಧವಾರ ಮಧ್ಯಾಹ್ನ ಆಹಾರ ಅರಸುತ್ತಾ ಕಾಡಿನಿಂದ ನಾಡಿಗೆ ಬಂದಿರುವ ಈ ಕಾಡಾನೆಗಳು ಅರಳವಾಡಿ ಗ್ರಾಮದ ಬಳಿ ಸುತ್ತಾಡುತ್ತಿವೆ. ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಪ್ರದೇಶ ಇದಾಗಿದ್ದು, ಎರಡೂ ರಾಜ್ಯಗಳ ಗಡಿ ಗ್ರಾಮಗಳ ರೈತರು ಕೃಷಿಯನ್ನೇ ಹೆಚ್ಚು ಅವಲಂಬಿಸಿದ್ದಾರೆ. ಇಂಥ ಸಂದರ್ಭದಲ್ಲಿ ತಾವು ಬೆಳೆದ ಕೃಷಿಯನ್ನು ಕಾಡಾನೆಗಳ ಹಿಂಡು ನಾಶ ಮಾಡುವ ಭೀತಿ ಇಲ್ಲಿನ ರೈತರಲ್ಲಿ ಮನೆಮಾಡಿದೆ.
ಸದ್ಯ ತಮಿಳುನಾಡಿನ ಅರಳವಾಡಿ ಗ್ರಾಮದ ಸಮೀಪ ಇರುವ ಕಾಡಾನೆಗಳ ಹಿಂಡು ಅಲ್ಲಿಂದ ನಮ್ಮ ರಾಜ್ಯದತ್ತ ಬರಬಹುದು ಎಂಬ ಭೀತಿ ಅರಕಲವಾಡಿ, ಬಿಸಲವಾಡಿ, ಯಾನಗಳ್ಳಿ, ಬಂಡಿಗೌಡನ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಲವು ರೈತರಲ್ಲಿ ಆವರಿಸಿದೆ. ಕಾಡಾನೆಗಳು ರಾಜ್ಯದ ಕೃಷಿ ಭೂಮಿಗಳತ್ತ ದಾಳಿ ಮಾಡುವ ಮುನ್ನವೇ ಅರಣ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಆನೆಗಳನ್ನು ಕಾಡಿಗೆ ಓಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಇತ್ತೀಚಿಗೆ ಕರ್ನಾಟಕದ ಹಲವು ಭಾಗಗಳಲ್ಲಿ ಕಾಡಾನೆಗಳ ದಾಳಿ ಹೆಚ್ಚುತ್ತಿದ್ದು, ಬೆಳೆ ನಾಶಪಡಿಸುತ್ತಿವೆ.
ಇದನ್ನೂ ನೋಡಿ:ಸೊಂಡಿಲಿನಲ್ಲಿ ಸೊಪ್ಪು ತಿನ್ನುತ್ತ ರಾಜ ಗಾಂಭೀರ್ಯದಿಂದ ಶಿರಾಡಿ ಹೆದ್ದಾರಿ ದಾಟಿದ ಕಾಡಾನೆ