ಹೊಗೆನಕಲ್ ಬಳಿ ಕಾವೇರಿ ನೀರಿನಲ್ಲಿ ರಿಲ್ಯಾಕ್ಸ್ ಮೂಡಿಗೆ ಜಾರಿದ ಆನೆಗಳ ಹಿಂಡು - ಹೊಗೆನಕಲ್ ಜಲಪಾತ
Published : Nov 21, 2023, 4:37 PM IST
ಚಾಮರಾಜನಗರ: ಬರೋಬ್ಬರಿ 19ಕ್ಕೂ ಹೆಚ್ಚು ಆನೆಗಳು ಇರುವ ಹಿಂಡು ಕಾವೇರಿ ನದಿಯನ್ನು ದಾಟಿ ಹನೂರು ತಾಲೂಕಿನ ಗಡಿ ಹೊಗೆನಕಲ್ ಪ್ರದೇಶಕ್ಕೆ ಬಂದಿದ್ದು, ಇವುಗಳನ್ನು ಯುವಕನೋರ್ವ ಸೆರೆ ಹಿಡಿದಿದ್ದಾನೆ. ಅದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಆನೆಗಳ ಚಲನವಲನದ ವಿಡಿಯೋವನ್ನು ಹೊಗೆನಕಲ್ನ ನಿವಾಸಿ ಗೋಪಿನಾಥಂ ಎಂಬ ಯುವಕ ಸೆರೆ ಹಿಡಿದಿದ್ದು, ಅದನ್ನು ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ.
19 ಆನೆಗಳ ಹಿಂಡು ಠಿಕಾಣಿ: ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದ ವ್ಯಾಪ್ತಿ ಹನೂರು ತಾಲೂಕಿನ ಗಡಿಯಲ್ಲಿ ಹೊಗೆನಕಲ್ ಜಲಪಾತದ ಬಳಿ 3 ಮರಿ ಸೇರಿದಂತೆ 19ಕ್ಕೂ ಹೆಚ್ಚು ಆನೆಗಳ ಹಿಂಡು ಠಿಕಾಣಿ ಹೂಡಿದ್ದು, ನದಿಯಲ್ಲಿ ನೀರನ್ನು ಮೈಮೇಲೆ ಎರಚಿಕೊಕೊಳ್ಳುತ್ತ ಮರಿಗಳೊಂದಿಗೆ ರಿಲ್ಯಾಕ್ಸ್ ಮೂಡಿನಲ್ಲಿರುವಂತೆ ಕಂಡುಬಂದಿವೆ.
ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ನೀರಿನ ಕೊರತೆ ಇರುವುದರಿಂದ ಆನೆಗಳು ಹೊರಗೆ ಬಂದಿರಬಹುದು ಎನ್ನಲಾಗ್ತಿದೆ. ಸದ್ಯ ಈ ಆನೆಗಳ ಗುಂಪು ಕಾವೇರಿ ನದಿ ದಂಡೆ ಸಮೀಪ ಹೊಗೆನಕಲ್ ಜಲಪಾತದ ಬಳಿ ಮೇವು ತಿನ್ನುತ್ತ ಅತ್ತಿಂದಿತ್ತ ಓಡಾಡುತ್ತಿವೆ. ದಣಿವು ಆದಾಗ ಹಿಂಡು ಹಿಂಡಾಗಿ ನೀರಿಗಿಳಿಯುತ್ತವೆ.
ಇದನ್ನೂ ಓದಿ:ಚಿಕ್ಕಮಗಳೂರು: ಕಬ್ಬಿನ ಗದ್ದೆಯಲ್ಲಿ ಆನೆಗಳು; ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ