ಕರ್ನಾಟಕ

karnataka

ದೆಹಲಿಯ ಹಲವೆಡೆ ಭಾರೀ ಮಳೆ

ETV Bharat / videos

ದೆಹಲಿಯ ಹಲವೆಡೆ ಭಾರಿ ಮಳೆ: ವಾರಾಂತ್ಯದಲ್ಲಿ ಮತ್ತಷ್ಟು ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ - ಭಾರತೀಯ ಹವಾಮಾನ ಇಲಾಖೆ

By

Published : Aug 19, 2023, 1:33 PM IST

ನವದೆಹಲಿ: ಶನಿವಾರ ಬೆಳಗ್ಗೆಯಿಂದ ದೆಹಲಿಯ ಹಲವು ಭಾಗಗಳು, ನೋಯ್ಡಾ ಸೇರಿದಂತೆ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ವಾತಾವರಣ ತಂಪಾಗಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಮಾನದಿಂದ ಜನರಿಗೆ ಬಿಗ್​ ರಿಲೀಫ್​ ಸಿಕ್ಕಿದೆ. ಆದರೆ, ಇನ್ನೊಂದೆ ಅತಿಯಾದ ಮಳೆಯಿಂದ ನಗರದ ಹಲವೆಡೆ ನೀರು ನಿಂತು ಜನರು ಪರದಾಡುವಂತಾಗಿದೆ.

ಮಧ್ಯ ಮತ್ತು ದಕ್ಷಿಣ ದೆಹಲಿ, ಗಾಜಿಯಾಬಾದ್​, ಗುರುಗ್ರಾಮ್​ ಹಾಗೂ ನೋಯ್ಡಾದ ಕೆಲವು ಭಾಗಗಳಲ್ಲಿ ಭಾರೀ ಮಳೆ ದಾಖಲಾಗಿದ್ದು, ಜಲಾವೃತದಿಂದಾಗಿ ಗುರುಗ್ರಾಮ್​ ಸೇರಿದಂತೆ ಹಲವೆಡೆ ಶನಿವಾರ ಸಂಚಾರ ಅಸ್ತವ್ಯಸ್ತಗೊಂಡು, ಜನರನ್ನು ಸುಸ್ತಾಗಿಸಿದೆ.  

ನವದೆಹಲಿಯ ಕಂಝವಾಲಾ, ದೆಹಲಿ ವಿಶ್ವವಿದ್ಯಾಲಯ ಹಾಗೂ ಪಂಜಾಬಿ ಬಾಗ್​ ಸೇರಿದಂತೆ ದೆಹಲಿಯ ಹಲವೆಡೆ ಗುಡುಗು ಸಹಿತ ಭಾರಿ ತೀವ್ರತೆಯ ಮಳೆಯಾಗಲಿದೆ. ಗಂಟೆಗೆ 30-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದಕ್ಕೂ ಮುನ್ನ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಆಗಸ್ಟ್​ 19 ರಿಂದ 23 ರವರೆಗೆ ಮಧ್ಯಮ ತೀವ್ರತೆಯ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಶುಕ್ರವಾರ ಹವಾಮಾನ ಇಲಾಖೆ ನೀಡಿತ್ತು.

ಇದನ್ನೂ ನೋಡಿ :ಅಯೋಧ್ಯಾ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ - ವಿಡಿಯೋ

ABOUT THE AUTHOR

...view details