Watch... ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ.. ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ವ್ಯತ್ಯಯ - etv bharat kannda
ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿಂದು ಭಾರಿ ಮಳೆಯಾಗಿದ್ದು, ರಾಜ್ಯದಲ್ಲಿ ಹೆಚ್ಚಿದ್ದ ಬಿಸಿಲಿನ ತಾಪಮಾನ ಕಡಿಮೆಯಾಗಿದೆ. ಮಳೆ ನಾಳೆಯೂ ಇದೇ ರೀತಿ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಮಾನ್ಸೂನ್ ಮಾರುತಗಳಿಂದ ಜುಲೈ 9 ರವರೆಗೆ ಕಾಶ್ಮೀರದಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿದೆ. ನದಿಗಳಲ್ಲಿ ಪ್ರವಾಹ ಬಂದಿದೆ. ಕೆಲವೆಡೆ ಕಾರುಗಳು ತೇಲಿಕೊಂಡು ಹೋಗಿವೆ. ಕಾಶ್ಮೀರದಲ್ಲಿ ಇಂದು ಭಾರಿ ಮಳೆಯಾಗಿದ್ದರಿಂದ ಬಿಸಿಲಿನ ಬೇಗೆಗೆ ಬಸವಳಿದಿದ್ದ ಜನರಲ್ಲಿ ಸಂತಸ ಮೂಡಿದೆ. ಜುಲೈ 7 ರಿಂದ 9 ರ ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸೋನಮ್ ಲೋಟಸ್ ಹೇಳಿದ್ದಾರೆ.
ಇಂದು ಶ್ರೀನಗರ 20 ಮಿಮೀ, ಖಾಜಿಗುಂಡ್ 94 ಮಿಮೀ, ಪಹಲ್ಗಾಮ್ 73.3 ಮಿಮೀ, ಕುಪ್ವಾರ 17.3 ಮಿಮೀ, ಕೊಕರ್ನಾಗ್ 76.3 ಮಿಮೀ, ಗುಲ್ಮಾರ್ಗ್ 42.4 ಮಿಮೀ, ಜಮ್ಮು 12.0 ಮಿಮೀ, ಬನಿಹಾಲ್ 103.8 ಮಿಮೀ, ಬಟೋಟೆ 16.4 ಮಿಮೀ, ಕತ್ರಾ 16.4 ಮಿಮೀ ಮತ್ತು ಭದೇರ್ವಾದಲ್ಲಿ 6.0 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ:ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ: ಮುಳುಗಡೆಯಾದ ಸುಕ್ಷೇತ್ರ ಉಕ್ಕಡಗಾತ್ರಿಯ ಸ್ನಾನಘಟ್ಟಗಳು