ಗುಜರಾತ್‌ನಲ್ಲಿ ಭಾರಿ ಮಳೆ: ಹಲವೆಡೆ ರಸ್ತೆಗಳು ಜಲಾವೃತ, ಮನೆಗಳಿಗೆ ನುಗ್ಗಿದ ನೀರು- ವಿಡಿಯೋ - etv bharat kannada
ಅಹಮದಾಬಾದ್:ಗುಜರಾತ್‌ನಲ್ಲಿ ವರುಣನ ಆರ್ಭಟ ಜೋರಾಗಿದೆ. ರಾಜ್ಯದಲ್ಲಿ ನದಿ, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಹಲವಾರು ಜಿಲ್ಲೆಗಳಲ್ಲಿ ವಾಸಸ್ಥಳಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಗಿರ್ ಸೋಮನಾಥ ಜಿಲ್ಲೆಯ ಸೂತ್ರಪದದಲ್ಲಿ ಬುಧವಾರ (ನಿನ್ನೆ) 22 ಮಿ.ಮೀ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ರಸ್ತೆ, ಮನೆಗಳು ಜಲಾವೃತಗೊಂಡಿವೆ. ಸೋಮನಾಥ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ವೆರಾವಲ್‌ನಲ್ಲಿ 19.50 ಮಿ.ಮೀ, ತಲಾಲದಲ್ಲಿ 12 ಮಿ.ಮೀ, ಕೋಡಿನಾರ್‌ನಲ್ಲಿ 8.50 ಮಿ.ಮೀ ಮಳೆ ಸುರಿದಿದೆ. ರಾಜ್‌ಕೋಟ್ ಜಿಲ್ಲೆಯಲ್ಲೂ ಕೂಡ ಅತಿ ಹೆಚ್ಚು ಮಳೆಯಾಗಿದೆ. ಇಲ್ಲಿನ ಧೋರಾಜಿ ತಾಲೂಕಿನಲ್ಲಿ ಜಮಕಂದೋರಣದಲ್ಲಿ 7 ಮಿ.ಮೀ, ಉಪ್ಲೇಟಾದಲ್ಲಿ 4.50 ಮಿ.ಮೀ, ಜುನಾಗಢ ಜಿಲ್ಲೆಯ ಮ್ಯಾಂಗ್ರೋಲ್‌ನಲ್ಲಿ 8 ಮಿ.ಮೀ, ಮೇದಾರದಲ್ಲಿ 4.25 ಮಿ.ಮೀ, ಕೇಶೋಡ್‌ನಲ್ಲಿ 3.50 ಮಿ.ಮೀ, ವಿಸಾವ್‌ದರ್‌ನಲ್ಲಿ 2.50 ಮಿ.ಮೀ, ಮಾಲಿಯಾದಲ್ಲಿ 2.25 ಮಿ.ಮೀ ಮಳೆಯಾಗಿದೆ.
ಇಂದು (ಗುರುವಾರ) ಅಮ್ರೇಲಿ, ಭಾವನಗರ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಪ್ರಸ್ತುತ ಕೆಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಇದನ್ನೂ ಓದಿ: ದೂರದಿಂದಲೇ ನಿಂತು ಗೋಕಾಕ್ ಫಾಲ್ಸ್ ವೀಕ್ಷಣೆಗೆ ಅವಕಾಶ: ಬಿಗಿ ಪೊಲೀಸ್ ಬಂದೋಬಸ್ತ್