ಅಪಾಯವನ್ನು ಲೆಕ್ಕಿಸದೆ ಹರಿಯುವ ನೀರಿನಲ್ಲಿ ಸಾಗುತ್ತಿರುವ ಜನರು - ಅಪಾರ ಪ್ರಮಾಣದ ಮಳೆ
ತುಮಕೂರು ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಕೂಡ ಕೆಲವೆಡೆ ವ್ಯಾಪಕ ಮಳೆಯಾಗಿದ್ದು, ಮಳೆ ನೀರು ಎಲ್ಲೆಂದರಲ್ಲಿ ನುಗ್ಗಿ ಹರಿಯುತ್ತಿದೆ. ಈ ನಡುವೆ ಜನರು ವಿಧಿಯಲ್ಲದೆ ರಸ್ತೆಗಳ ಮೇಲೆ ಹರಿಯುತ್ತಿರುವ ನೀರಿನಲ್ಲಿಯೇ ಓಡಾಡುತ್ತಿದ್ದಾರೆ. ಜಿಲ್ಲೆಯ ಕೊರಟಗೆರೆ ಚಿಕ್ಕನಾಯಕನಹಳ್ಳಿ, ಕುಣಿಗಲ್ ಶಿರಾ ತಾಲೂಕಿನಲ್ಲಿ ಅಪಾರ ಪ್ರಮಾಣದ ಮಳೆ ನೀರು ಹಳ್ಳ ಕೊಳ್ಳಗಳಲ್ಲಿ ಹರಿದು ಬಂದು ಕೆರೆಗಳಿಗೆ ಸೇರುತ್ತಿವೆ. ಇನ್ನು ಕೆರೆಗಳು ತುಂಬಿ ಹರಿಯುತ್ತಿರುವ ಕಾರಣ ಸಮೀಪದ ಗ್ರಾಮಗಳು ಹಾಗೂ ತೋಟಗಳಿಗೆ ನೀರು ನುಗ್ಗುತ್ತಿದೆ. ಹೀಗಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
Last Updated : Feb 3, 2023, 8:27 PM IST