ಮನಾಲಿಯಲ್ಲಿ ಭಾರಿ ಮಳೆ : ಬಸ್ ಮತ್ತು ಬಸ್ ನಿಲ್ದಾಣಕ್ಕೆ ನುಗ್ಗಿದ ಮಳೆ ನೀರು - ಮನಾಲಿಯ ವೋಲ್ವೋ ಬಸ್ ನಿಲ್ದಾಣಕ್ಕೆ ನುಗ್ಗಿದ ಮಳೆ ನೀರು
ಮನಾಲಿ(ಹಿಮಾಚಲಪ್ರದೇಶ ): ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಇಲ್ಲಿನ ನದಿಗಳು ಮತ್ತು ತೊರೆಗಳು ಉಕ್ಕಿ ಹರಿಯುತ್ತಿದೆ. ಭಾರಿ ಮಳೆಗೆ ಮನಾಲಿಯ ವೋಲ್ವೋ ಬಸ್ ನಿಲ್ದಾಣಕ್ಕೆ ಏಕಾಏಕಿ ನೀರು ನುಗ್ಗಿದ್ದು, ಬಸ್ ನಿಲ್ದಾಣ ಚರಂಡಿಯಂತಾಗಿದೆ. ಬಸ್ನ ಒಳಗೂ ಮಳೆ ನೀರು ನುಗ್ಗಿದ್ದರಿಂದ ಸಾಕಷ್ಟು ಹಾನಿಯಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಲ್ಲಿದ್ದ ವಾಹನಗಳನ್ನು ಸ್ಥಳಾಂತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಕುಲುವಿನಲ್ಲಿ ನಿರಂತರ ಮಳೆಯಿಂದಾಗಿ, ಹಲವೆಡೆ ಭೂಕುಸಿತ ಮತ್ತು ಪ್ರವಾಹದ ಪರಿಸ್ಥಿತಿಗಳು ನಿರ್ಮಾಣವಾಗಿದೆ. ಕಳೆದ ವಾರ ಉಂಟಾದ ಮೇಘಸ್ಫೋಟದಲ್ಲಿ ನಾಲ್ವರು ನಾಪತ್ತೆಯಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದರು.
Last Updated : Feb 3, 2023, 8:24 PM IST