ಕರ್ನಾಟಕ

karnataka

ಉತ್ತರ ಭಾರತಕ್ಕೆ ವರುಣಾಘಾತ

ETV Bharat / videos

ಹರಿಯಾಣದ ಶಾಲಾ ಕಟ್ಟಡಕ್ಕೆ ಜಲ ದಿಗ್ಬಂಧನ; ಹಗ್ಗದ ಸಹಾಯದಿಂದ 730 ವಿದ್ಯಾರ್ಥಿನಿಯರ ರಕ್ಷಣೆ- ವಿಡಿಯೋ - ETV Bharath Karnataka

By

Published : Jul 11, 2023, 8:45 AM IST

ಅಂಬಾಲಾ (ಹರಿಯಾಣ): ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದೆ. ಹರಿಯಾಣದಲ್ಲೂ ವರುಣಾರ್ಭಟ ಜೋರಾಗಿಯೇ ಇದೆ. ಇಲ್ಲಿನ ಅಂಬಾಲಾ ಎಂಬಲ್ಲಿರುವ ಚಮನ್‌ ವಟಿಕಾ ಕನ್ಯಾ ಗುರುಕುಲ ಹೆಣ್ಣು ಮಕ್ಕಳ ಶಾಲಾ ಕಟ್ಟಡಕ್ಕೆ ಮಳೆ ನೀರು ದಿಗ್ಬಂಧನ ಹಾಕಿತ್ತು. ಸುಮಾರು 730ಕ್ಕೂ ಹೆಚ್ಚು ಬಾಲಕಿಯರು ಸಂಕಷ್ಟಕ್ಕೆ ಸಿಲುಕಿದ್ದರು. ಮಕ್ಕಳ ಪೋಷಕರು ಆಂತಕಕ್ಕೀಡಾಗಿದ್ದರು.

ಈ ವಿಷಯ ತಿಳಿದ ತಕ್ಷಣ ಸಲಕರಣೆಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಭಾರತೀಯ ಸೇನೆ, ಎನ್‌ಡಿಆರ್‌ಎಫ್‌ ಮತ್ತು ಸ್ಥಳೀಯ ಪೊಲೀಸರು ಜತೆಗೂಡಿ ರಕ್ಷಣಾ ಕಾರ್ಯ ಕೈಗೊಂಡರು. ಶಾಲಾ ಕಟ್ಟಡದಲ್ಲಿ ಸಿಲುಕಿದ್ದ ಎಲ್ಲ ಹೆಣ್ಣು ಮಕ್ಕಳನ್ನು ಹಗ್ಗದ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ರವಾನಿಸಿದರು.

ಹರಿಯಾಣದಲ್ಲೂ ಮತ್ತಷ್ಟು ಮಳೆ ಸುರಿಯುವ ಬಗ್ಗೆ ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜನರು ನದಿ ಪಾತ್ರಗಳ ಬಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ಹಲವೆಡೆ ಶಾಲಾ- ಕಾಲೇಜುಗಳಿಗೆ ಈಗಾಗಲೇ ಸಂಬಂಧಿತ ಜಿಲ್ಲಾಧಿಕಾರಗಳು ರಜೆ ಘೋಷಿಸಿವೆ. ದೇಶಾದ್ಯಂತ ಮಳೆ ಸಂಬಂಧಿತ ಪ್ರಕರಣಗಳಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡ ಬಗ್ಗೆ ವರದಿಯಾಗಿದೆ. 

ಇದನ್ನೂ ಓದಿ:ಉತ್ತರಾಖಂಡದಲ್ಲಿ ಗುಡ್ಡ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.. 

ABOUT THE AUTHOR

...view details