Heavy Rain: ತುಮಕೂರಲ್ಲಿ ಭಾರಿ ಮಳೆಯಿಂದ ಭೂಕುಸಿತ: ರೈಲು ಸಂಚಾರ ವ್ಯತ್ಯಯ - ನಿಜಾಮುದ್ದೀನ್ ಎಕ್ಸ್‌ಪ್ರೆಸ್
ತುಮಕೂರು: ಕಳೆದ ಕೆಲವು ದಿನಗಳಿಂದ ರಾಜ್ಯದ ಕೆಲವೆಡೆ ಬಿಡದೇ ಮಳೆಯಾಗುತ್ತಿದ್ದು, ಕೆಲವೊಂದು ಕಡೆ ಮಳೆಯಿಂದ ಅವಾಂತರಗಳು ಸಂಭವಿಸುತ್ತಿವೆ. ಇದೀಗ ರೈಲ್ವೆ ಹಳಿ ಬಳಿ ಭೂ ಕುಸಿತವಾದ ಹಿನ್ನೆಲೆಯಲ್ಲಿ ರೈಲು ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿರುವ ಘಟನೆ ತಿಪಟೂರು ನಗರದ ಗಾಂಧಿ ನಗರದ ಬಳಿ ಸಂಭವಿಸಿದೆ. ತಿಪಟೂರಿನ ಗಾಂಧಿನಗರದ ಅಂಡರ್ ಪಾಸ್ ಬಳಿ ಲಘು ಭೂಕುಸಿತ ಉಂಟಾಗಿತ್ತು. ಅಂಡರ್ ಪಾಸ್ನಲ್ಲಿ ತುಂಬಿದ್ದ ಮಳೆ ನೀರಿನಿಂದಾಗಿ ಭೂಕುಸಿತವಾಗಿದೆ.
ಜೆಸಿಬಿಯಿಂದ ಕಾರ್ಯಾಚರಣೆ ಮಾಡುತ್ತಿರುವ ರೈಲ್ವೆ ಇಲಾಖೆ ಸಿಬ್ಬಂದಿ, ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಸೇರಿದಂತೆ ಬೆಂಗಳೂರು ಕಡೆಗೆ ಹೋಗುವ ಅನೇಕ ರೈಲುಗಳ ಸಂಚಾರದಲ್ಲಿ ಈ ಭೂಕುಸಿತದಿಂದಾಗಿ ವ್ಯತ್ಯಯವಾಗಿದೆ. ಕೆಲವು ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸುಮಾರು ಹತ್ತು ಅಡಿಗೂ ಹೆಚ್ಚು ಭೂಕುಸಿತವಾಗಿದ್ದು, ಆ ಜಾಗದಲ್ಲಿ ನೀರು ಸಂಗ್ರಹವಾಗಿದೆ. ಅಲ್ಲದೆ ವೈಜ್ಞಾನಿಕವಾಗಿ ಅಂಡರ್ ಪಾಸ್ ನಿರ್ಮಾಣ ಮಾಡಿರುವುದೇ ಈ ಅವಾಂತರಕ್ಕೆ ಪ್ರಮುಖ ಕಾರಣ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.
ಇದನ್ನೂ ಓದಿ:Monsoon-Enters Karnataka: ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ: ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್