Heavy flood: ಭಾರಿ ಮಳೆ ಹಿನ್ನೆಲೆ ಕಾಜಿಪೇಟೆ ರೈಲು ನಿಲ್ದಾಣ ಜಲಾವೃತ.. - ತುಂಬಿ ಹರಿಯುತ್ತಿರುವ ನದಿ
ವರಂಗಲ್ (ತೆಲಂಗಾಣ):ಭಾರಿ ಮಳೆಗೆ ವರಂಗಲ್ ನಗರ ತತ್ತರಿಸಿದೆ. ಭದ್ರಕಾಳಿ ದೇವಸ್ಥಾನದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ನೀರು ನುಗ್ಗಿದೆ. ಕಾಜಿಪೇಟ್ ರೈಲು ನಿಲ್ದಾಣ, ವರಂಗಲ್ ಬಟ್ಟೆ ಬಜಾರ್ ಮತ್ತಿತರ ಪ್ರದೇಶಗಳಲ್ಲಿ ಮಳೆಯ ನೀರು ಹರಿದಿದೆ. ಹನುಮಕೊಂಡ - ವರಂಗಲ್ ರಸ್ತೆ ಸೇತುವೆ ಮೇಲಿನಿಂದ ಪ್ರವಾಹ ಹರಿಯುತ್ತಿದ್ದರೆ, ವರಂಗಲ್ ರೈಲ್ವೆ ಸೇತುವೆಯ ಕೆಳಗೆ ಅಪಾರ ಪ್ರಮಾಣದ ನೀರು ನಿಂತಿತ್ತು. ವರಂಗಲ್- ಖಮ್ಮಂ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದ್ದು, ಪಂಟಿನಿ ಗ್ರಾಮದ ಕೆರೆ ತುಂಬಿ ಹರಿಯುತ್ತಿದೆ. ಜೊತೆಗೆ ರಸ್ತೆ ಮೇಲೆ ತುಂಬಾ ನೀರು ಹರಿಯುತ್ತಿದೆ. ಮೈಲಾರಂನಲ್ಲಿ ಬೃಹತ್ ಮರ ಬಿದ್ದು ಅಪಾರ ಸಂಖ್ಯೆಯಲ್ಲಿ ವಾಹನಗಳು ನಿಂತಿದ್ದವು. ಇನ್ನೂ ಎರಡು ದಿನಗಳ ಕಾಲ ಜಿಲ್ಲಾ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಮೇಯರ್ ಗುಂಡು ಸುಧಾರಾಣಿ ಆದೇಶಿಸಿದರು.
ತುಂಬಿ ಹರಿಯುತ್ತಿರುವ ನದಿ, ಪ್ರವಾಹದಲ್ಲಿ ಸಿಲುಕಿದ ಸ್ಥಳೀಯರು:ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಕೆಸಿಆರ್ ಅವರು ಪ್ರಗತಿ ಭವನದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ನೀರಿನಲ್ಲಿ ಮುಳುಗಿರುವ ಮೊರಂಚಪಲ್ಲಿ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್ ತೆರಳುವಂತೆ ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ಪರಿಹಾರ ಕಾರ್ಯಾಚರಣೆಯಲ್ಲಿ ಸಾಮಾನ್ಯ ಹೆಲಿಕಾಪ್ಟರ್‌ಗಳ ಸೇವೆಯನ್ನು ಬಳಸುವುದು ಕಷ್ಟವಾಗಬಹುದು ಎಂಬ ಕಾರಣದಿಂದ ಸರ್ಕಾರವು ಭಾರತೀಯ ಸೇನೆಯೊಂದಿಗೆ ಸಮಾಲೋಚನೆ ನಡೆಸಿದೆ. ಸಿಎಸ್ ಶಾಂತಿಕುಮಾರಿ ಅವರು ಸಿಕಂದರಾಬಾದ್ ಕಂಟೋನ್ಮೆಂಟ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಮಾತನಾಡಿ ಅವರು, ಜಲಾವೃತಗೊಂಡಿರುವ ಮೊರಂಚಪಲ್ಲಿ ಗ್ರಾಮಕ್ಕೆ ಎರಡು ಸೇನಾ ಹೆಲಿಕಾಪ್ಟರ್‌ಗಳನ್ನು ಕಳುಹಿಸುತ್ತಿದ್ದೇವೆ. ಎನ್ಡಿಆರ್ಎಫ್ ತಂಡಗಳನ್ನು ತೆರಳಿವೆ ಎಂದರು.
ವಿಶೇಷ ಅಧಿಕಾರಿಗಳ ನೇಮಕ:ಮತ್ತೊಂದೆಡೆ, ಭಾರಿ ಮಳೆಯ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಿಗೆ ವಿಶೇಷ ಅಧಿಕಾರಿಗಳನ್ನು (ಐಎಎಸ್) ಸಿಎಸ್ ಶಾಂತಿಕುಮಾರಿ ನೇಮಿಸಿದ್ದಾರೆ. ಮುಳುಗಡೆಯಾಗಿರುವ ಜಿಲ್ಲೆಗೆ ವಿಶೇಷ ಅಧಿಕಾರಿಯಾಗಿ ಕೃಷ್ಣ ಆದಿತ್ಯ, ಭೂಪಾಲಪಲ್ಲಿಗೆ ಪಿ.ಗೌತಮ್, ನಿರ್ಮಲ್‌ಗೆ ಮುಷರಫ್ ಅಲಿ, ಮಂಚಿರ್ಯಾಲ್‌ಗೆ ಭಾರತಿ ಹೋಳಿಕೇರಿ, ಪೆದ್ದಪಲ್ಲಿ ಜಿಲ್ಲೆಗೆ ಸಂಗೀತಾ ಸತ್ಯನಾರಾಯಣ, ಆಸಿಫಾಬಾದ್ ಜಿಲ್ಲೆಗೆ ವಿಶೇಷ ಅಧಿಕಾರಿಯಾಗಿ ಹನ್ಮಂತರಾವ್ ನೇಮಕ ಮಾಡಲಾಗಿದೆ.
ಇದನ್ನೂ ಓದಿ:Karnataka Rains: ರಾಜ್ಯಾದ್ಯಂತ ಮುಂಗಾರು ಮಳೆ ಹನಿಗಳ ಲೀಲೆ! PHOTOಗಳಲ್ಲಿ ನೋಡಿ..