ಕುಮಾರಸ್ವಾಮಿ ಬುಟ್ಟಿಯೊಳಗೆ ಹಾವಿಲ್ಲ: ಸಚಿವ ಜಮೀರ್ ಅಹಮ್ಮದ್ - H D Kumarswamy
ವಿಜಯನಗರ: ಮಾಜಿ ಸಿಎಂ ಕುಮಾರಸ್ವಾಮಿ ಅವರ ಪೆಂಡ್ರೈವ್ ಬುಟ್ಟಿಯೊಳಗೆ ಹಾವಿಲ್ಲದ ವಿಚಾರ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ವ್ಯಂಗ್ಯವಾಡಿದರು. ಹೊಸಪೇಟೆಯ ಪತ್ರಿಕಾಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಮಾರಸ್ವಾಮಿ ಅವರ ಬಳಿ ಪೆಂಡ್ರೈವ್ ಇದ್ದಿದ್ರೆ, ಇಷ್ಟು ದಿನ ಯಾಕೆ ಬಿಡಲಿಲ್ಲ?. ಅವರು ತಮ್ಮ ಬುಟ್ಟಿಯೊಳಗೆ ಹಾವಿದೆ ಅಂತ ಭಯ ಉಂಟುಮಾಡಲು ಆ ರೀತಿ ಮಾತಾಡುತ್ತಿದ್ದಾರೆ. ಕುಮಾರಸ್ವಾಮಿ ಬುಟ್ಟಿಯೊಳಗೆ ಹಾವು ಇಲ್ಲ, ಆದರೆ ಅವರು ಬುಟ್ಟಿಯಲ್ಲಿ ಹಾವಿದೆ.. ಹಾವಿದೆ.. ಅಂತಿದ್ದಾರೆ ಎಂದರು.
ಕೃಷಿ ಸಚಿವರ ವಿರುದ್ಧ ಅಧಿಕಾರಿಗಳು ಬರೆದಿದ್ದಾರೆ ಎನ್ನಲಾದ ಪತ್ರದ ವಿಚಾರವಾಗಿ ಈಗಾಗಲೇ ಸಿಎಂ ಮಾತನಾಡಿದ್ದಾರೆ. ಕೆಲವರು ನಕಲಿ ಪತ್ರಗಳನ್ನು ವೈರಲ್ ಮಾಡಿದ್ದಾರೆ. ಯಾರ ಹೆಸರಿನಲ್ಲಿ ಪತ್ರ ವೈರಲ್ ಆಗಿದೆಯೋ, ಅವರೇ ನಾವು ಬರೆದಿಲ್ಲ ಅಂತಿದ್ದಾರೆ. ಅವರು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಇದರಲ್ಲಿ ಹೆಚ್ಡಿಕೆ ಅವರ ಪಾತ್ರವಿಲ್ಲ ಬಿಡಿ. ಅವರು ಸರ್ಕಾರದ ವಿರುದ್ಧದ Pedrive ಬುಟ್ಟಿಗಳ ಹಾವು ಅಷ್ಟೇ. ಬರೀ, ಬುಸ್ ಬುಸ್ ಅಂತಿದೆ, ಹೊರಗಡೆ ಬರ್ತಿಲ್ಲ ಎಂದರು.
ಇದನ್ನೂ ಓದಿ:'ನೀವು ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ, ಬೇಗ ಗುಣಮುಖರಾಗಿ': ಹೆಚ್‌ಡಿಕೆಗೆ ಸಿದ್ದರಾಮಯ್ಯ ತಿರುಗೇಟು