ತೋಟದ ಮನೆಯಲ್ಲಿ ಆಯುಧ ಪೂಜೆ ಆಚರಿಸಿದ ಮಾಜಿ ಸಿಎಂ ಹೆಚ್ಡಿಕೆ - ಈಟಿವಿ ಭಾರತ ಕನ್ನಡ
ರಾಮನಗರ : ಬಿಡದಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬಸ್ಥರೊಂದಿಗೆ ಆಯುಧ ಪೂಜೆ ನೆರವೇರಿಸಿದರು. ಸಾಂಪ್ರದಾಯಿಕ ಉಡುಗೆಯನ್ನು ಉಟ್ಟು ಆಯುಧ ಪೂಜೆಯಲ್ಲಿ ಭಾಗಿಯಾದರು. ಅರ್ಚಕ ತ್ಯಾಗರಾಜ ಭಟ್ ಅವರ ನೇತೃತ್ವದಲ್ಲಿ ನಡೆದ ಆಯುಧ ಪೂಜೆಯಲ್ಲಿ, ತೋಟದ ಮನೆಯ ಆಯುಧ, ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಗಂಗಾ ಪೂಜೆ, ಗೋವುಗಳಿಗೂ ವಿಶೇಷ ಪೂಜೆ ನಡೆಸಿದರು. ತೋಟದ ಮನೆಯಲ್ಲಿರುವ ಪುಂಗನೂರು ತಳಿ ಹಾಗೂ ಹಳ್ಳಿಕಾರ್ ತಳಿ, ಗೀರ್ ತಳಿ ಸೇರಿದಂತೆ ನಾಟಿ ಹಸುಗಳಿಗೂ ಪೂಜೆ ಮಾಡಲಾಯಿತು. ಬಳಿಕ ತೋಟದ ಕೆಲಸಗಾರರಿಗೆ ಮತ್ತು ಬಿಡದಿಯ ಪೌರ ಕಾರ್ಮಿಕರಿಗೆ ಶುಭ ಹಾರೈಸಿ ಸಿಹಿತಿಂಡಿ, ಉಡುಗೊರೆ ವಿತರಣೆ ಮಾಡಿದರು. ಟ್ವೀಟ್ ಮೂಲಕದ ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆಯ ಶುಭಾಶಯ ಕೋರಿದ್ದಾರೆ.
Last Updated : Feb 3, 2023, 8:28 PM IST