ಬರೋಬ್ಬರಿ 174 ಕಿ.ಮೀ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸಿ ಹರಕೆ ತೀರಿಸಿದ ಹಾವೇರಿಯ ಯುವಕ: ವಿಡಿಯೋ - ಹಾವೇರಿ ನ್ಯೂಸ್
Published : Aug 29, 2023, 12:25 PM IST
ಹಾವೇರಿ:ದೇವರಿಗೆ ಹರಕೆ ತೀರಿಸುವುದು ಎಂದರೆ ಉರುಳು ಸೇವೆ ಮಾಡುವುದು, ದೇಣಿಗೆ ಹಾಗೂ ಮುಡಿ ನೀಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸಿದ್ದಾನೆ. ಬರೋಬ್ಬರಿ 174 ಕಿ.ಮೀ ಟ್ರ್ಯಾಕ್ಟರ್ ರಿವರ್ಸ್ ಡ್ರೈವ್ ಮಾಡಿಕೊಂಡು ಹೋಗಿ ಹರಕೆ ತೀರಿಸುವ ಮೂಲಕ ಜನರ ಗಮನ ಸೆಳೆದಿದ್ದಾನೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ನಿವಾಸಿ 25 ವರ್ಷದ ಶಿವನಗೌಡ ಪಾಟೀಲ ಈ ಸಾಹಸ ಮಾಡಿರುವ ಭಕ್ತ. ಟ್ರ್ಯಾಕ್ಟರ್ ಟ್ರಾಲಿ ಸಮೇತ ಹಿಮ್ಮುಖವಾಗಿ ಚಲಾಯಿಸಿಕೊಂಡು ಉಳುವಿ ಚನ್ನಬಸವೇಶ್ವರ ದೇವಾಲಯಕ್ಕೆ ತಲುಪಿ ದೇವರ ದರ್ಶನ ಮಾಡಿದ್ದಾನೆ. ಸುಮಾರು 16 ತಾಸಿನಲ್ಲಿ 174 ಕಿ.ಮೀ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗಿದ್ದಾರೆ.
5 ವರ್ಷಗಳ ಹಿಂದೆ ಹರಕೆ ಮಾಡಿಕೊಂಡಿದ್ದ ಶಿವನಗೌಡ ಈ ವರ್ಷ ಹರಕೆ ತೀರಿಸಿದ್ದಾನೆ ಎಂದು ತಿಳಿದು ಬಂದಿದೆ. ಹಗಲು ರಾತ್ರಿ ಎನ್ನದೇ ಸತತವಾಗಿ ಹಿಮ್ಮುಖವಾಗಿ ಡ್ರೈವಿಂಗ್ ಮಾಡಿಕೊಂಡು ಹರಕೆ ತೀರಿಸಿದ್ದಾನೆ. ಹಿಮ್ಮುಖವಾಗಿ ಟ್ರ್ಯಾಕ್ಟರ್ ಎಂಜಿನ್ ಚಲಾಯಿಸುವುದೇ ಕಷ್ಟ. ಹೀಗಿರುವಾಗ ಟ್ರಾಲಿ ಸಮೇತ ಅವರು ಪ್ರಯಾಣ ಮಾಡಿದ್ದಾರೆ. ಯುವಕನ ಸಾಹಸಕ್ಕೆ ಊರಿನ ಹಾಗೂ ಜಿಲ್ಲೆಯ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಹಿಮ್ಮುಖವಾಗಿ 24 ಕಿ.ಮೀ ಟ್ರ್ಯಾಕ್ಟರ್ ಚಲಾಯಿಸಿ ₹1.45 ಲಕ್ಷ ಬಹುಮಾನ ಗೆದ್ದ ಯುವಕ