ಬಿಎಸ್ವೈ, ದೇವೇಗೌಡರ ಮಕ್ಕಳಂತೆ ಬಂಗಾರಪ್ಪನವರ ಮಕ್ಕಳು ಒಂದಾಗಬೇಕು: ಹಾಲಪ್ಪ ಹರತಾಳು
Published : Dec 10, 2023, 7:29 AM IST
|Updated : Dec 10, 2023, 8:08 AM IST
ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪನವರು ಒಗ್ಗಟ್ಟಿನಿಂದ ಇರಬೇಕೆಂಬುದು ನಮ್ಮ ಸಮಾಜದ ಬೇಡಿಕೆ ಎಂದು ಮಾಜಿ ಶಾಸಕ ಹಾಲಪ್ಪ ಹರತಾಳು ಹೇಳಿದ್ದಾರೆ. ಜಿಲ್ಲೆಯ ಸಾಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಮುಖ್ಯಮಂತ್ರಿಗಳ ಮಕ್ಕಳು ಒಟ್ಟಿಗೆ ಇರುವುದನ್ನು ನೋಡಿದರೆ ಜನಸಾಮಾನ್ಯರಿಗೆ ಹಾಗೇ ಅನಿಸುತ್ತದೆ. ಆದರೆ ನಾನು ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಅವರು ಬೇರೆಯೇ ಇರಲೆಂದು ಬಯಸುತ್ತೇನೆ. ಆದರೆ ಸಮಾಜದ ಮುಖಂಡನಾಗಿ ಹೇಳುವುದಾದರೆ ಹೆಚ್.ಡಿ.ದೇವೇಗೌಡರ ಮಕ್ಕಳು ಅಣ್ಣ-ತಮ್ಮ ಒಟ್ಟಾಗಿ ಒಬ್ಬರಿಗೊಬ್ಬರು ಬೆಂಬಲವಾಗಿ ಇದ್ದಾರೆ. ಅದೇ ರೀತಿ ಯಡಿಯೂರಪ್ಪನವರ ಮಕ್ಕಳೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ. ಮಾಜಿ ಸಿಎಂ ಬಂಗಾರಪ್ಪನವರ ಪುತ್ರರೂ ಕೂಡ ಹೊಂದಾಣಿಕೆಯಿಂದ ಇರಬೇಕು ಎಂಬುದೇ ಸಮಾಜದ, ಬಂಧುಬಾಂಧವರ ಇಚ್ಛೆ. ಆದರೆ ರಾಜಕಾರಣಿಯಾಗಿ ನಾನು ಆ ಮಾತನ್ನು ಹೇಳುವುದು ತಪ್ಪಾಗುತ್ತದೆ. ಯಾಕೆಂದರೆ ನಾನು 100 ಪರ್ಸೆಂಟ್ ಬಿಜೆಪಿ ಎಂದು ಹೇಳುತ್ತಾ ತುಸು ನಕ್ಕರು.
ಸುದ್ದಿಗೋಷ್ಠಿಯಲ್ಲಿ ಡಾ.ರಾಜನಂದಿನಿ ಕಾಗೋಡು ತಿಮ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಸಚಿವ ಮಧು ಬಂಗಾರಪ್ಪಗೆ ಅಹಂ ಜಾಸ್ತಿ, ಅಧಿಕಾರದ ಪಿತ್ತ ನೆತ್ತಿಗೇರಿದೆ: ಬೇಳೂರು ಗೋಪಾಲಕೃಷ್ಣ