ಕಾಂಗ್ರೆಸ್ ಶಾಸಕರ ನಿವಾಸದಲ್ಲಿ ಡಿಕೆಶಿ ಜೊತೆ ಕುಳಿತು ಊಟ ಮಾಡಿದ ಹೆಚ್ ವಿಶ್ವನಾಥ್ - ಡಿಕೆಶಿ ಜೊತೆ ಬಿಜೆಪಿ ನಾಯಕನ ಊಟ
ಮೈಸೂರು ಜಿಲ್ಲೆಯ ಹುಣಸೂರಿನ ಕಾಂಗ್ರೆಸ್ ಶಾಸಕರ ಮನೆಯಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೊತೆ ಊಟ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಇಂದು ಹುಣಸೂರಿನಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಿಕೆಶಿ, ಹೆಚ್.ವಿಶ್ವನಾಥ್, ಹೆಚ್ ಡಿ ಕುಮಾರಸ್ವಾಮಿ, ಜಿ ಟಿ ದೇವೇಗೌಡ, ಕಾಂಗ್ರೆಸ್ನ ಸ್ಥಳೀಯ ಶಾಸಕ ಹೆಚ್.ಪಿ ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮ ಬಳಿಕ ಹೆಚ್.ಪಿ ಮಂಜುನಾಥ್ ಮನೆಯಲ್ಲಿ ಡಿಕೆಶಿ ಮತ್ತು ಹೆಚ್ ವಿಶ್ವನಾಥ್ ಒಟ್ಟಿಗೆ ಕುಳಿತು ಊಟ ಸೇವಿಸಿದರು.
Last Updated : Feb 3, 2023, 8:27 PM IST