ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ.. ಸಿದ್ದೇಶ್ವರ ಶ್ರೀಗಳ ಅಗ್ನಿ ಸ್ಪರ್ಶ ಸ್ಥಳಕ್ಕೆ ಪೂಜೆ - ಈಟಿವಿ ಭಾರತ ಕನ್ನಡ
ವಿಜಯಪುರ: ಇಲ್ಲಿನ ಜ್ಞಾನಯೋಗಾಶ್ರಮದಲ್ಲಿ ಹುಣ್ಣಿಮೆ ಹಿನ್ನೆಲೆ ಶುಕ್ರವಾರ ಸಂಜೆ ಗುರು ಪೂರ್ಣಿಮಾ ಕಾರ್ಯಕ್ರಮ ಜರುಗಿತು. ಸಿದ್ದೇಶ್ವರ ಶ್ರೀಗಳ ಅನುಪಸ್ಥಿತಿಯಲ್ಲಿ ಈ ಬಾರಿ ಸರಳವಾಗಿ ಗುರು ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪೂಜ್ಯರ ಗುರುಗಳಾಗಿದ್ದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಗೆ ಪೂಜೆ ನೆರವೇರಿಸಲಾಯಿತು. ಬಳಿಕ ಮಲ್ಲಿಕಾರ್ಜುನ ಶ್ರೀಗಳ ಪ್ರಣವ ಮಂಟಪ ಪ್ರದಕ್ಷಿಣೆ ನಡೆಯಿತು. ಜೊತೆಗೆ ದೀಪೋತ್ಸವ, ಮಂಗಳಾರತಿ ಮತ್ತು ಪಲ್ಲಕ್ಕಿ ಹೊತ್ತು ಭಜನೆ, ನಾಮಸ್ಮರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಆಶ್ರಮಕ್ಕೆ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಆಗಮಿಸಿ ಶ್ರೀಗಳ ಅಗ್ನಿಸ್ಪರ್ಶ ಸ್ಥಳಕ್ಕೆ ಪೂಜೆ ನೆರವೇರಿಸಿದರು.
Last Updated : Feb 3, 2023, 8:38 PM IST