ಕರ್ನಾಟಕ

karnataka

ಸಹೋದರನ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಯುವಕ ಸಾವು... ವಿಡಿಯೋ ವೈರಲ್

ETV Bharat / videos

ಸಹೋದರನ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಯುವಕ ಸಾವು.. ವಿಡಿಯೋ ವೈರಲ್ - groom brother died

By

Published : Jun 17, 2023, 5:27 PM IST

ಇಟಾಹ್ (ಉತ್ತರ ಪ್ರದೇಶ):ಸಹೋದರನ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಹಠಾತ್​ ಹೃದಯಾಘಾತ ಉಂಟಾಗಿ ಯವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವಕನನ್ನು ಇಟಾಹ್ ಜಿಲ್ಲೆಯ ರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸಂಜು ಎಂದು ಗುರುತಿಸಲಾಗಿದೆ.  

ಶಹಜಹಾನ್‌ಪುರ ಜಿಲ್ಲೆಯ ಗೋಕುಲಪುರ ಪೊಲೀಸ್ ಠಾಣೆಯ ಕಲಾನ್‌ ಗ್ರಾಮದಲ್ಲಿ ಸಂಜುವಿನ ಸಹೋದರನ ಮದುವೆ ಮೆರವಣಿಗೆ ನಡೆಯುತ್ತಿತ್ತು. ಸಂಜು ತನ್ನ ಸಹೋದರನ ಮದುವೆಯ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದ. ಮೆರವಣಿಗೆಯು ಡಿಜೆ ಸದ್ದಿನೊಂದಿಗೆ ಸಾಗುತ್ತಿತ್ತು. ಸಹೋದರನ ಮದುವೆಯ ಖುಷಿಯಲ್ಲಿ ಸಂಜು ಕೂಡ ಎಲ್ಲರೊಂದಿಗೆ ಕುಣಿಯುತ್ತಿದ್ದ. ಆದರೆ, ಡ್ಯಾನ್ಸ್ ಮಾಡುತ್ತ ಇದ್ದಕ್ಕಿದ್ದ ಹಾಗೆ ನೆಲದ ಮೇಲೆ ಆತ ಮಲಗಿದ್ದ. ಡ್ಯಾನ್ಸ್ ವೇಳೆ ಮಲಗಿ ನಟಿಸುತ್ತಿದ್ದಾನೆ ಎಂದು ಸುತ್ತಮುತ್ತಲ್ಲಿನ ಜನ ಭಾವಿಸಿದ್ದರು.

ಆದರೆ, ಬಹಳ ಹೊತ್ತಾದರೂ ಸಂಜು ಎದ್ದೇಳದ ಕಾರಣ ಇತರರು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆಗ ದೇಹದಲ್ಲಿ ಯಾವುದೇ ಚಲನೆ ಕಂಡು ಬಂದಿಲ್ಲ. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲೇ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ವರನ ಸಹೋದರನ ಸಾವಿನ ಸುದ್ದಿ ಕೇಳಿ ಮದುವೆಯ ಮನೆಯಲ್ಲಿ ದುಃಖದ ಛಾಯೆ ಆವರಿಸಿತ್ತು. ಸಂಜು ಮೃತದೇಹವನ್ನು ತಡರಾತ್ರಿ ರಾಂಪುರಕ್ಕೆ ತರಲಾಗಿದೆ. ಸದ್ಯ ಡ್ಯಾನ್ಸ್​ ಮಾಡುತ್ತಲೇ ಯುವಕ ಕುಸಿದು ಬಿದ್ದು ಸಾವನ್ನಪ್ಪಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ಲಂಚಬಾಕ ಪೊಲೀಸರ ವಿರುದ್ಧ ಆಕ್ರೋಶ​; ಠಾಣೆ ಎದುರು ಕಂತೆ ಕಂತೆ ನೋಟು ಎಸೆದು ಮಹಿಳೆಯ ಹತಾಶೆ- ವಿಡಿಯೋ

ABOUT THE AUTHOR

...view details