ಕರ್ನಾಟಕ

karnataka

ಮನೆ ಮನೆಗೂ ಗೃಹಲಕ್ಷ್ಮಿ

ETV Bharat / videos

ಮನೆ ಮನೆಗೂ ಗೃಹಲಕ್ಷ್ಮಿ; ಆಗಸ್ಟ್ 15 ರಿಂದ 2000 ರೂ. ಹಣ ಜಾರಿ : ಸಿಎಂ ಸಿದ್ದರಾಮಯ್ಯ - ಮುಖ್ಯಮಂತ್ರಿ ಸಿದ್ದರಾಮಯ್ಯ

By

Published : Jun 2, 2023, 5:37 PM IST

Updated : Jun 2, 2023, 7:35 PM IST

ಗೃಹ ಲಕ್ಷ್ಮಿ ಯೋಜನೆ :ಇಂದು ಕಾಂಗ್ರೆಸ್ ಪಕ್ಷದ ಎರಡನೇ ಗ್ಯಾರಂಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.​ ತಾಂತ್ರಿಕ ಸಮಸ್ಯೆಗಳಿಂದಾಗಿ ಈಗಾಲೇ ಗೃಹ ಲಕ್ಷ್ಮಿ ಯೋಜನೆ 2000 ರೂ. ಗಳನ್ನು ಮನೆ ಯಜಮಾನಿಯ ಅಕೌಂಟ್ ಗೆ ಜಮೆ ಮಾಡಲು ಸಾಧ್ಯವಿಲ್ಲ. ಆದರಿಂದ ಮನೆ ಯಜಮಾನಿಯ ಅಕೌಂಟ್ ಗೆ 2 ಸಾವಿರ ಜಮೆ ಮಾಡಲು ಆಧಾರ್ ಕಾರ್ಡ್, ಅಕೌಂಟ್ ನಂಬರ್ ಮೊದಲು ಕೊಡಬೇಕು. ಹಾಗೂ ಜೂನ್ 15 ರಿಂದ ಈ ಯೋಜನೆಯ ಫಲಾನುಭವಿಗಳು ಆಗಬೇಕಾದರೆ ಅನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಈ ಯೋಜನೆ ಪ್ರೋಸಸ್ ಜುಲೈ 15 ರಿಂದ ಶುರುವಾಗಲಿದ್ದು, ಆಗಸ್ಟ್ 15 ರಿಂದ ಕುಟುಂಬದ ಯಜಮಾನಿ ಅಕೌಂಟ್​ಗೆ ಹಣ ಹಾಕಲಾಗುವುದು. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರು ಎಲ್ಲರೂ ಈ ಯೋಜನೆಯಲ್ಲಿ ಫಲಾನುಭವಿಗಳು ಮತ್ತು ಯಾವುದೇ ಷರತ್ತುಗಳು ಅನ್ವಯಿಸುವುದಿಲ್ಲ ಎಂದು ಸಿಎಂ ಅವರು ಘೋಷಣೆ ಮಾಡಿದ್ದಾರೆ.     

ಇದನ್ನೂ ಓದಿ :'ಷರತ್ತು'ಗಳು ಗ್ಯಾರಂಟಿ- ಸರ್ಕಾರದ ಯೋಜನೆಗಳು ನಿಯಮ, ನಿಬಂಧನೆಗಳಿಗೆ ಒಳಪಟ್ಟಿರುತ್ತವೆ: ಪ್ರಿಯಾಂಕ್ ಖರ್ಗೆ

Last Updated : Jun 2, 2023, 7:35 PM IST

ABOUT THE AUTHOR

...view details