ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ವಿಚಾರಣೆ ಮುಗಿಸಿ ಬಂದ ಪಿಎಫ್ಐ ಸದಸ್ಯನಿಗೆ ಭರ್ಜರಿ ಸ್ವಾಗತ - ಈಟಿವಿ ಭಾರತ ಕನ್ನಡ
ಮೈಸೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ ವಿಚಾರಣೆ ಎದುರಿಸಿ ಬಂದ ಪಿಎಫ್ಐ ಕಾರ್ಯಕರ್ತನಿಗೆ ಹೂವಿನ ಹಾರ ಹಾಕಿ ಸ್ವಾಗತ ಮಾಡಲಾಗಿದೆ. ಮೈಸೂರಿಗೆ ಆಗಮಿಸಿದ ತಂಡ ಮೈಸೂರಿನ ಪಿಎಫ್ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಲೆಮಾನ್ ಎಂಬುವನನ್ನು ವಶಕ್ಕೆ ಪಡೆದು ಗೌಪ್ಯ ಸ್ಥಳದಲ್ಲಿ ನಿನ್ನೆ ದಿನವಿಡೀ ವಿಚಾರಣೆ ನಡೆಸಿತ್ತು. ವಿಚಾರಣೆ ನಡೆಸಿದ ನಂತರ ಸಂಜೆ ಸುಲೆಮಾನ್ನನ್ನು ವಾಪಸ್ ಕಳಿಸಿತ್ತು. ಈ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Last Updated : Feb 3, 2023, 8:25 PM IST