ಪೂಜೆಗೆಂದು ದೇವಸ್ಥಾನಕ್ಕೆ ಬಂದ ಮಹಿಳೆಗೆ ಇನ್ಸ್‌ಪೆಕ್ಟರ್ ಕಪಾಳಮೋಕ್ಷ ಆರೋಪ: ವಿಡಿಯೋ ವೈರಲ್
ಗೋರಖ್‌ಪುರ:ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಪೂಜೆಗೆಂದು ಬಾಬಾ ಮುಕ್ತೇಶ್ವರನಾಥ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಗೆ ಇಲ್ಲಿನ ಇನ್ಸ್ಪೆಕ್ಟರ್ವೊಬ್ಬರು ಕಪಾಳಮೋಕ್ಷ ಮಾಡಿರುವ ಆರೋಪ ಕೇಳಿಬಂದಿದೆ. ದರೇಗಾ ಕುನ್ವರ್ ಗೌರವ್ ಸಿಂಗ್ ಕಪಾಳಮೋಕ್ಷ ಮಾಡಿದ ಇನ್ಸ್‌ಪೆಕ್ಟರ್ ಎಂದು ತಿಳಿದು ಬಂದಿದೆ. ಘಟನೆ ವೇಳೆ ಅವರೊಂದಿಗೆ ಕೆಲ ಮಹಿಳಾ ಪೊಲೀಸ್ ಸಿಬ್ಬಂದಿಯೂ ಇದ್ದರು. ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಮಹಿಳೆಯು ಜಲಾಭಿಷೇಕಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಸಣ್ಣ ವಿಚಾರವೊಂದಕ್ಕೆ ವಾಗ್ವಾದ ಮತ್ತು ಮಾತಿನ ಚಕಮಕಿ ನಡೆದಿದ್ದು, ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗುತ್ತಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳಾ ಪೊಲೀಸರು ಆ ಮಹಿಳೆಯನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಜಮಾವಣೆಯಾಗಿರುವುದನ್ನು ಸಹ ಕಾಣಬಹುದು. ಆದರೆ, ಇನ್ಸ್‌ಪೆಕ್ಟರ್ ದರೇಗಾ ಕುನ್ವರ್ ಗೌರವ್ ಸಿಂಗ್ ಅವರನ್ನು ತಡೆಯುವ ಪ್ರಯತ್ನವನ್ನು ಯಾರು ಮಾಡಿಲ್ಲ. ಸಿಂಗ್ ಸಾರಿಗೆ ನಗರ ಚೌಕಿಯ ಉಸ್ತುವಾರಿ ವಹಿಸಿದ್ದು, ಮುಕ್ತೇಶ್ವರನಾಥ ದೇವಸ್ಥಾನದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದರು. ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಪ್ರತಿ ಶಿವರಾತ್ರಿಯಂದು ಜನರು ಮುಕ್ತೇಶ್ವರನಾಥ ದೇವಾಲಯದಲ್ಲಿ ಬಂದು ಜಲಾಭಿಷೇಕ ಮಾಡುತ್ತಾರೆ. ಇಂದು ಸಹ ಸರತಿ ಸಾಲಿನಲ್ಲಿ ನಿಂತಿದ್ದಾಗ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಇನ್ಸ್‌ಪೆಕ್ಟರ್ ದರೇಗಾ ಅವರು ಮಹಿಳೆಯನ್ನು ಎಲ್ಲರ ಮುಂದೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ತಂಜಾವೂರಿನಲ್ಲಿ ಸಾರಿ ವಾಕಥಾನ್: 2000 ಮಹಿಳೆಯರಿಂದ ಸೀರೆಯ ನಡಿಗೆ ಸ್ಪರ್ಧೆ