ಕರ್ನಾಟಕ

karnataka

ರೈಲಿನ ಕೆಳಗೆ ಸಿಲುಕಿದ ಮಹಿಳೆ

By

Published : Feb 11, 2023, 8:57 PM IST

Updated : Feb 14, 2023, 11:34 AM IST

ETV Bharat / videos

Watch... ಚಲಿಸುವ ರೈಲಿನ ಕೆಳಗೆ ಸಿಲುಕಿದ ಮಹಿಳೆ ಪ್ರಾಣಾಪಾಯದಿಂದ ಪಾರು!

ಗಯಾ (ಬಿಹಾರ್​): ಶಿಕ್ಷಕಿಯೊಬ್ಬರು ಹಳಿ ದಾಟುವ ವೇಳೆ ನಿಂತಿದ್ದ ರೈಲು ಏಕಾಏಕಿ ಚಲಿಸಲು ಪ್ರಾರಂಭಿಸಿದ ಹಿನ್ನೆಲೆ ಹಳಿಗಳ ನಡುವೆ ಸಿಲುಕಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಲ್ಲಿಯ ನಬಾದ್​ ವಿಭಾಗದ ಟಂಕುಪ್ಪಾ ರೈಲು ನಿಲ್ದಾಣದಲ್ಲಿ ನಡೆದಿದೆ. ಮತ್ತೊಂದು ಬದಿಯ ಪ್ಲಾಟ್​ಫಾರ್ಮ್​ಗೆ ಹೋಗಲೆಂದು ಅಲ್ಲೇ ನಿಂತಿದ್ದ ಗೂಡ್ಸ್​ ರೈಲಿನಡಿಯಿಂದ ಹಳಿ ದಾಟಲು ಶಿಕ್ಷಕಿ ಮುಂದಾಗಿದ್ದಾರೆ. ಹಳಿಗಳ ಮಧ್ಯೆ ಹೋಗುತ್ತಿದ್ದಂತೆ ಏಕಾಏಕಿ ರೈಲು ಅಲ್ಲಿಂದ ಚಲಿಸಲು ಪ್ರಾರಂಭಿಸಿದೆ. ಇದರಿಂದ ಶಿಕ್ಷಕಿಗೆ ದಾಟಲಾಗದೇ ಮಧ್ಯದಲ್ಲಿ ಸಿಲುಕಿ ಹಳಿಗಳ ನಡುವೆ ಮಲುಗಿದ್ದಾರೆ. 

ಇನ್ನು ಕಲ್ಲಿದ್ದಲು ತುಂಬಿದ್ದ ಗೂಡ್ಸ್​ ರೈಲು ಅವರ ಮೇಲಿಂದ ಹಾದು ಹೋಗಿದ್ದು, ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಸ್ಥಳೀಯರೊಬ್ಬರು ವಿಡಿಯೋವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಕೂಡ ಆಗಿದೆ.

ಇದನ್ನೂ ಓದಿ:ಕಳಚಿಕೊಂಡ ಸತ್ಯಾಗ್ರಹ ಎಕ್ಸ್‌ಪ್ರೆಸ್‌ ರೈಲು ಬೋಗಿಗಳು; ಪ್ರಾಣ ಭಯ ಎದುರಿಸಿದ ಪ್ರಯಾಣಿಕರು!

Last Updated : Feb 14, 2023, 11:34 AM IST

ABOUT THE AUTHOR

...view details