ಹಳಿ ದಾಟುವಾಗ ಏಕಾಏಕಿ ಸಂಚಾರ ಆರಂಭಿಸಿದ ಗೂಡ್ಸ್ ರೈಲು: ಟ್ರ್ಯಾಕ್ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡ ವೃದ್ಧ - ವಿಡಿಯೋ - etv bharat karnataka
ಗಯಾ(ಬಿಹಾರ): ರೈಲ್ವೇ ಹಳಿ ದಾಟುತ್ತಿದ್ದಾಗ ಏಕಾಏಕಿ ರೈಲು ಸಂಚರಿಸಿದ ಪರಿಣಾಮ ವೃದ್ಧನೊಬ್ಬರು ರೈಲ್ವೆ ಹಳಿ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಗಯಾ-ಕೊಡೆರ್ಮಾ ರೈಲ್ವೆ ವಿಭಾಗದ ಫತೇಪುರ್ ಬ್ಲಾಕ್‌ನ ಪಹರ್‌ಪುರ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಾಲೋ ಯಾದವ್ ಸಾವಿನ ದವಡೆಯಿಂದ ಪಾರಾದ ವೃದ್ಧ ಎಂದು ತಿಳಿದುಬಂದಿದೆ.
ಪಹರ್‌ಪುರ ನಿಲ್ದಾಣದಲ್ಲಿ ಗೂಡ್ಸ್ ರೈಲು ನಿಂತಿತ್ತು. ಈ ವೇಳೆ ಬಾಲೋ ಯಾದವ್ ಹಳಿ ದಾಟಲು ಮುಂದಾಗಿದ್ದರು. ತಕ್ಷಣ ಗೂಡ್ಸ್ ರೈಲು ಏಕಾಏಕಿ ಸಂಚರಿಸಲು ಆರಂಭಿಸಿದೆ. ಗಾಬರಿಗೊಂಡ ಅಲ್ಲಿದ್ದ ಜನರು ವೃದ್ಧನಿಗೆ ಟ್ರ್ಯಾಕ್ ಮಧ್ಯೆ ಮಲಗಲು ಸೂಚಿಸಿದ್ದಾರೆ. ಟ್ರ್ಯಾಕ್ ಮಧ್ಯೆ ಮಲಗಿದ್ದ ವೃದ್ಧನ ಮೇಲೆ ಒಂದರ ನಂತರ ಒಂದರಂತೆ ಬೋಗಿಗಳು ಹಾದು ಹೋದರು ಸಣ್ಣ ತರಚಿದ ಗಾಯವು ಆಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೂಡ್ಸ್ ರೈಲು ತನ್ನ ಮೇಲೆ ಹಾದು ಹೋದ ಬಳಿಕ ವೃದ್ಧ ಎದ್ದು ಅಲ್ಲಿಂದ ತೆರಳುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೃದ್ಧನ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಯಾವತ್ತು ಈ ರೀತಿ ಅಜಾಗರೂಕತೆಯಿಂದ ಯಾರೂ ಕೂಡ ಹಳಿಯನ್ನು ದಾಟಬಾರದು. ಏಕೆಂದರೆ ಇದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿರುತ್ತದೆ.
ಇದನ್ನೂ ಓದಿ:ಮುಂಬೈ ಪಂಚತಾರಾ ಟ್ರೈಡೆಂಟ್ ಹೊಟೇಲಿನ ಮೇಲೆ ಬೆಂಕಿ ಇಲ್ಲದ ಹೊಗೆ: ವಿಡಿಯೋ