ಹಂದಿ ವಿಷಯಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ: ಭಯಾನಕ ವಿಡಿಯೋ - ಈಟಿವಿಭಾರತಕನ್ನಡ
ಸುರೇಂದ್ರನಗರ (ಗುಜರಾತ್) : ವಾಧ್ವಾನ್ 80 ಅಡಿ ರಸ್ತೆಯಲ್ಲಿ ಒಂದೇ ಜಾತಿಯ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಹಂದಿ ಹಿಡಿದಿದ್ದಕ್ಕೆ ಈ ಜಗಳ ನಡೆದಿದೆ ಎನ್ನಲಾಗ್ತಿದೆ. 2ರಿಂದ 3 ಮಂದಿ ಕೈಯಲ್ಲಿ ಕತ್ತಿ ಹಿಡಿದು ಮತ್ತೊಂದು ಗ್ಯಾಂಗ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 3ರಿಂದ 4 ಮಂದಿಗೆ ಗಂಭೀರ ಗಾಯಗಳಾಗಿವೆ. ರಸ್ತೆಯಲ್ಲಿ ಈ ಘಟನೆ ನಡೆದಿದ್ದರಿಂದ ಜನರು ಭಯಭೀತರಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ಸುಗಮಗೊಳಿಸಲು ಮುಂದಾಗುವ ಜೊತೆಗೆ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಕಾನೂನು ಕ್ರಮ ಕೈಗೊಂಡಿದ್ದಾರೆ.
Last Updated : Feb 3, 2023, 8:25 PM IST