ಗುಡ್ ಫ್ರೈಡೇ 2023.. ಯೇಸುವಿನ ಬಲಿದಾನದ ನೆನಪಿಗಾಗಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ - ಚರ್ಚ್‌ಗಳಲ್ಲಿ ಪ್ರಾರ್ಥನೆ
ಇಡುಕ್ಕಿ(ಕೇರಳ): ಇಂದು ಗುಡ್ ಫ್ರೈಡೇ. ಪ್ರಪಂಚದ ಎಲ್ಲ ಭಾಗಗಳಲ್ಲಿ ಬೆಳಗ್ಗೆಯಿಂದ ಯೇಸುವಿನ ಬಲಿದಾನದ ನೆನಪಿಗಾಗಿ ಕ್ರಿಶ್ಚಿಯನ್ ಚರ್ಚ್‌ಗಳಲ್ಲಿ ಪ್ರಾರ್ಥನೆ ಮತ್ತು ಮೆರವಣಿಗೆ ನಡೆದವು. ಪ್ರತಿ ವರ್ಷ ಈಸ್ಟರ್‌ಗೂ ಹಿಂದಿನ ಶುಕ್ರವಾರ 'ಗುಡ್ ಫ್ರೈಡೇʼ ಆಚರಿಸಲಾಗುತ್ತದೆ. ಇದು ಯೇಸುವನ್ನು ಶಿಲುಬೆಗೇರಿಸಿದ ದಿನವೂ ಹೌದು. ಈ ಆ ಕಾರಣಕ್ಕೆ ಇದು ಶುಭಸೂಚಕವಲ್ಲ ಎಂಬ ನಂಬಿಕೆಯೂ ಇದೆ. ಗುಡ್ ಫ್ರೈಡೇ ಕ್ರಿಶ್ಚಿಯನ್ ಸಮುದಾಯದವರ ಬಹಳ ಮಹತ್ವದ ದಿನ. ಪ್ರಪಂಚದಾದ್ಯಂತ ಕ್ರಿಶ್ಚಿಯನ್ನರು ಚರ್ಚ್‌ಗೆ ಭೇಟಿ ನೀಡುವ ಮೂಲಕ ಶುಭ ಶುಕ್ರವಾರದ ಆಚರಣೆಯಲ್ಲಿ ತೊಡಗುವುದು ವಿಶೇಷ.
ಶುಭ ಶುಕ್ರವಾರ ಹೆಸರಿನಲ್ಲಿ ಸಾಂಕೇತಿಕವಾಗಿ ಶುಭವನ್ನು ಸೂಚಿಸಿದರೂ ಕೂಡ ಕ್ರಿಶ್ಚಿಯನ್ ಸಮುದಾಯಕ್ಕೆ ಇದು ದುಃಖದ ದಿನ. ಈ ದಿನದಂದು ಕೆಲವರು ಉಪವಾಸ ಮಾಡುತ್ತಾರೆ. ಇನ್ನೂ ಕೆಲವರು ಶೋಕ ಹಾಗೂ ದುಃಖದ ದಿನವನ್ನಾಗಿ ಆಚರಿಸುತ್ತಾರೆ. ಈ ದಿನದಂದು ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನ. ಆ ಕಾರಣಕ್ಕೆ ಇದು ಶುಭಸೂಚಕವಲ್ಲ ಮತ್ತು ದುಃಖದ ದಿನ ಎಂಬುದು ನಂಬಿಕೆ. ಶೋಕಾಚರಣೆಯ ಈ ದಿನವನ್ನು ಬ್ಲ್ಯಾಕ್ ಫ್ರೈಡೇ, ಗ್ರೇಟ್ ಫ್ರೈಡೇ ಎಂದೂ ಕರೆಯುತ್ತಾರೆ. ಈ ದಿನದಂದು ಯೇಸು ತನ್ನ ಮರಣದ ನಂತರ ಪುನಃ ಮರುಜೀವ ಪಡೆದ ದಿನ ಎಂದು ನಂಬಲಾಗಿದೆ. ಹಾಗಾಗಿ ಇದನ್ನು ಶುಭ ಶುಕ್ರವಾರ ಎಂದೂ ಹೇಳಲಾಗುತ್ತದೆ.