ಕರ್ನಾಟಕ

karnataka

ಕೂಲಹಳ್ಳಿ ಗೋಣಿಬಸವೇಶ್ವರ ಅದ್ಧೂರಿ ರಥೋತ್ಸವ

ETV Bharat / videos

ಕೂಲಹಳ್ಳಿ ಗೋಣಿಬಸವೇಶ್ವರ ಅದ್ಧೂರಿ ರಥೋತ್ಸವ.. ದ್ರೋನ್​ ಕ್ಯಾಮರಾದಲ್ಲಿ ಸೆರೆಯಾದ ಜನಸಾಗರ - ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವ

By

Published : Mar 4, 2023, 9:11 AM IST

ವಿಜಯನಗರ: ಎಲ್ಲಿ ನೋಡಿದರೆಲ್ಲಿ ಜನವೋ ಜನ.. ಈ ಜನಸಾಗರದ ಮಧ್ಯೆ ಅದ್ಧೂರಿಯಾಗಿ ಸಿಂಗಾರಗೊಂಡಿರುವ ರಥ. ಹೌದು.., ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿಯ ಶ್ರೀ ಗೋಣಿಬಸವೇಶ್ವರ ರಥೋತ್ಸವವು ಭಕ್ತಸಾಗರದ ನಡುವೆ ಸಕಲ ಬಿರುದಾವಳಿಗಳಿಂದ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. 

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಾಗಿ.. ಈ ಅದ್ಧೂರಿ ರಥೋತ್ಸವದಲ್ಲಿ ವಿಜಯನಗರ, ಬಳ್ಳಾರಿ, ಗದಗ, ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

ದ್ರೋನ್​ ಕ್ಯಾಮರಾದಲ್ಲಿ ಸೆರೆಯಾದ ರಥೋತ್ಸವದ ವೈಭವ.. ಅರ್ಚಕರು ರಥ ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಮಹಾ ಮಂಗಳಾರತಿ ಮಾಡಿದರು. ಭರ್ಜರಿ ಜಯಘೋಷಗಳ ನಡುವೆ ರಥೋತ್ಸವಕ್ಕೆ ಉತ್ತರಾಭಿಮುಖವಾಗಿ ಚಾಲನೆ ನೀಡಲಾಯಿತು. ಭಕ್ತರು ರಥಕ್ಕೆ ಬಾಳೆಹಣ್ಣು, ಹೂವು ಎಸೆದು ಹರಕೆ ತೀರಿಸಿದರು. ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವದ ದೃಶ್ಯವನ್ನು ಡ್ರೋನ್​ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದು, ಅದ್ಭುತವಾಗಿದೆ. 

ಬಳ್ಳಾರಿಯಲ್ಲಿ ನಡೆದಿದ್ದ ಕನಕ ದುರ್ಗ ಸಿಡಿ ಬಂಡಿ ಉತ್ಸವ..ರಾಜ್ಯ ಮಾತ್ರವಲ್ಲದೆ, ಆಂಧ್ರಪ್ರದೇಶದಲ್ಲೂಭಕ್ತರನ್ನು ಹೊಂದಿರುವ ಬಳ್ಳಾರಿ ನಗರದ ಆದಿದೇವತೆ ಶ್ರೀಕನಕ ದುರ್ಗಮ್ಮ ದೇವಿ ಸಿಡಿಬಂಡಿ ರಥೋತ್ಸವವು ಮಂಗಳವಾರ ಸಂಭ್ರಮ, ಶ್ರದ್ಧಾ, ಭಕ್ತಿಯಿಂದ ಜರುಗಿತ್ತು. ಸಾವಿರಾರು ಜನರು ಸಿಡಿಬಂಡಿ ರಥೋತ್ಸವದ ಪ್ರದಕ್ಷಿಣೆಯ ದರ್ಶನ ಪಡೆದಿದ್ದರು. 

ಇದನ್ನೂ ಓದಿ.. ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಿಯ ಅದ್ಧೂರಿ ಸಿಡಿಬಂಡಿ ರಥೋತ್ಸವ.. ಹರಿದುಬಂದ ಭಕ್ತಸಾಗರ

ABOUT THE AUTHOR

...view details