ಕರ್ನಾಟಕ

karnataka

ಮೀನುಗಾರರ ಬಲೆಗೆ ಬಿತ್ತು ಚಿನ್ನದ ಆಮೆ : ವಿಡಿಯೋ

ETV Bharat / videos

ಮೀನುಗಾರರ ಬಲೆಗೆ ಬಿತ್ತು ಚಿನ್ನದ ಬಣ್ಣದ ಆಮೆ: ವಿಡಿಯೋ ನೋಡಿ - ಚಿನ್ನದ ಬಣ್ಣದ ಆಮೆ

By

Published : Jul 9, 2023, 2:12 PM IST

ಶ್ರೀ ಸತ್ಯಸಾಯಿ (ಆಂಧ್ರಪ್ರದೇಶ) : ಇಲ್ಲಿನ ಮೀನುಗಾರರ ಬಲೆಗೆ ಅಪರೂಪದ ಚಿನ್ನದ ಬಣ್ಣದ ಆಮೆ ಸಿಕ್ಕಿದೆ. ಶ್ರೀ ಸತ್ಯಸಾಯಿ ಜಿಲ್ಲೆಯ ಮಡಕಶಿರಾ ಮಂಡಲದ ಕಲ್ಲುಮರಿ ಗ್ರಾಮದಲ್ಲಿ ಆಮೆ ಪತ್ತೆಯಾಗಿದೆ. ಇದನ್ನು ದಡಕ್ಕೆ ತಂದಿರುವ ಮೀನುಗಾರರು ಆಮೆಯ ವಿಡಿಯೋವನ್ನು ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಶುಕ್ರವಾರ ಗ್ರಾಮದ ಕೆರೆಯಲ್ಲಿ ಮೀನುಗಾರರು ಮೀನು ಹಿಡಿಯಲು ಬಲೆ ಹಾಕಿದ್ದರು. ಈ ವೇಳೆ ಅವರ ಬಲೆಗೆ ಅಪರೂಪದ ಚಿನ್ನದ ವರ್ಣದ ಆಮೆ ಬಲೆಗೆ ಬಿದ್ದಿದೆ. ಬಳಿಕ ಅದನ್ನು ಹಿಡಿದು ದಡಕ್ಕೆ ತಂದು ಅದೇ ಕೆರೆಯಲ್ಲಿ ಬಿಡಲಾಯಿತು.

ಸಾಮಾನ್ಯವಾಗಿ ಆಮೆಗಳು ಕಂದು ಬಣ್ಣದಲ್ಲಿ ಕಾಣ ಸಿಗುತ್ತವೆ. ಇವುಗಳಲ್ಲಿ ಹಲವು ವಿಧಗಳಿದ್ದರೂ ಬಣ್ಣದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಆದರೆ ಈ ಅಪರೂಪದ ಆಮೆಯು ಬಣ್ಣ ಚಿನ್ನದ ಬಣ್ಣವನ್ನು ಹೊಂದಿದ್ದು ಎಲ್ಲರನ್ನು ಆಕರ್ಷಿಸುತ್ತಿದೆ. ಆಮೆ ಸೆರೆ ಸಿಕ್ಕಿರುವ ಸುದ್ದಿ ತಿಳಿದು ನೂರಾರು ಗ್ರಾಮಸ್ಥರು ನೋಡಲು ಆಗಮಿಸಿದ್ದರು.

ಇದನ್ನೂ ಓದಿ :ಮೀನುಗಾರನ ಬಲೆಗೆ ಬಿತ್ತು ಚಿನ್ನದ ಆಮೆ!

ABOUT THE AUTHOR

...view details