ಕರ್ನಾಟಕ

karnataka

ಚಿನ್ನಾಭರಣ ಕಳ್ಳತನ

ETV Bharat / videos

ಜ್ಯುವೆಲ್ಲರಿಯಿಂದ 100 ಕೆಜಿ ಚಿನ್ನ, ಬೆಳ್ಳಿ ಆಭರಣ ಕದ್ದೊಯ್ದ ಕಳ್ಳರು! ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ - ಚಿನ್ನ ಬೆಳ್ಳಿ ಕಳ್ಳತನ

By

Published : Feb 12, 2023, 8:11 PM IST

Updated : Feb 14, 2023, 11:34 AM IST

ಬರಾನ್ (ರಾಜಸ್ಥಾನ):ಇಲ್ಲಿನ ಚಿಪಬರೋಡ್‌ನಲ್ಲಿರುವ ಆಭರಣ ಮಳಿಗೆಯಲ್ಲಿ ಶನಿವಾರ ತಡರಾತ್ರಿ ಕಳ್ಳತನ ನಡೆದಿದೆ. ಪ್ರಕರಣದ ಕುರಿತು ರಾಜಸ್ಥಾನ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚಿಪಬರೋಡ್‌ನಲ್ಲಿರುವ ಆಭರಣ ಮಳಿಗೆಯೊಂದರ ಶಟರ್ಸ್​ ಮುರಿದು ಕನಿಷ್ಠ ಎಂಟು ಮಂದಿ ಕಳ್ಳರು 100 ಕೆಜಿ ಚಿನ್ನ ಮತ್ತು ಬೆಳ್ಳಿ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಇಲ್ಲಿನ ಪೊಲೀಸ್ ಠಾಣಾಧಿಕಾರಿ ಚಂದ್ರಪ್ರಕಾಶ್ ಯಾದವ್ ಮಾಹಿತಿ ನೀಡಿದ್ದಾರೆ.

ಕಳ್ಳತನದ ವಿಷಯ ತಿಳಿಯುತ್ತಿದ್ದಂತೆ ಎಸ್‌ಪಿ ಕಲ್ಯಾಣ್​ಮಲ್ ಮೀನಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನ ದಳ, ಎಫ್‌ಎಸ್‌ಎಲ್ ತಂಡ ಮತ್ತು ಸೈಬರ್ ಸೆಲ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಸಮಯದಲ್ಲಿ, ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡು ಮುಂದಿನ ಹಂತದ ತನಿಖೆ ಕೈಗೊಂಡಿದ್ದಾರೆ. ಸುಮಾರು ಎಂಟು ಜನ ಮುಸುಕುಧಾರಿ ದರೋಡೆಕೋರರು ಶಸ್ತ್ರಾಸ್ತ್ರ ಹಿಡಿದು ಚಿನ್ನಾಭರಣ ಹೊತ್ತೊಯ್ಯುತ್ತಿರುವುದನ್ನು ಗಮನಿಸಿದ್ದಾರೆ. ಸುಮಾರು 100 ಕೆಜಿ ಚಿನ್ನ ಮತ್ತು ಬೆಳ್ಳಿ ಆಭರಣ ಕಳ್ಳತನ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. 

ಉದ್ಯಮಿ ಗೌತಮ್ ಕುಮಾರ್ ಅವರ ಸಹೋದರ, ಚಿನ್ನಾಭರಣ ಮಳಿಗೆಯ ಮಾಲೀಕ ಕಿಶನ್ ಗೋಯಲ್ ಅವರು ತಮ್ಮ ನಿವಾಸದ ಸಮೀಪವಿರುವ ತಮ್ಮ ಅಂಗಡಿಯಲ್ಲಿ ಶಬ್ದ ಕೇಳಿ ರಾತ್ರಿ ಎಚ್ಚರಗೊಂಡು ಸ್ಥಳಕ್ಕೆ ಧಾವಿಸಿ ಗಮನಿಸಿದ್ದಾರೆ. ಮೂವರು ಕಳ್ಳರನ್ನು ಗಮನಿಸಿದ್ದು, ಅವರು ಕಿಶನ್ ಮೇಲೆ ದಾಳಿ ಮಾಡಿದ್ದಾರೆ. ಕಿಶನ್​ ಗೋಯಲ್ ತಮ್ಮ ಪರವಾನಗಿ ಪಡೆದ ಬಂದೂಕನ್ನು ತರುವಷ್ಟರಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ.

ಮಾಲೀಕ ಗೋಯಲ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಷ್ಟು ಚಿನ್ನ ಮತ್ತು ಬೆಳ್ಳಿ ಕಳ್ಳತನವಾಗಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ ಕಳ್ಳರು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ, ತಿಜೋರಿ ಸಹ ಮುರಿದು ಬಿದ್ದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳರ ವ್ಯಾನ್ ಗೋಚರಿಸಿದ್ದು, ಆ ವಾಹನಕ್ಕೆ ನಂಬರ್ ಪ್ಲೇಟ್ ಇರಲಿಲ್ಲ. ಆದರೆ ಪೊಲೀಸರು ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿ ದರೋಡೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಛತ್ತೀಸ್‌ಗಢದಲ್ಲಿ ನಿಲ್ಲದ ನಕ್ಸಲ್​ ಅಟ್ಟಹಾಸ.. ಒಂದೇ ವಾರದಲ್ಲಿ ಮೂವರು ಬಿಜೆಪಿ ಮುಖಂಡರ ಹತ್ಯೆ

Last Updated : Feb 14, 2023, 11:34 AM IST

ABOUT THE AUTHOR

...view details