ಮರಳಿನಲ್ಲಿ ಅರಳಿದ ದುರ್ಗಾ ಮಾತೆ.. ಪಟ್ನಾಯಕ್ ಮರಳು ಶಿಲ್ಪಕ್ಕೆ 14 ಬಗೆಯ ಹಣ್ಣುಗಳ ಅಲಂಕಾರ - ಒಡಿಸ್ಸಾದ ಮರಳು ಕಲಾವಿದ ಪದ್ಮಶ್ರೀ ಸುದರ್ಶನ್ ಪಟ್ನಾಯಕ್
ನವರಾತ್ರಿಗೆ ದುರ್ಗಾ ಪೂಜೆ ವಿಶೇಷ. ಒಡಿಶಾದ ಮರಳು ಕಲಾವಿದ ಪದ್ಮಶ್ರೀ ಸುದರ್ಶನ ಪಟ್ನಾಯಕ್ ಅವರು ದುರ್ಗಾಪೂಜೆಯ ಹಿನ್ನೆಲೆ ಪುರಿ ಸಮುದ್ರ ತೀರದಲ್ಲಿ ವಿವಿಧ ಹಣ್ಣುಗಳೊಂದಿಗೆ ದುರ್ಗಾ ಮಾತೆಯ ಮರಳಿನ ಶಿಲ್ಪವನ್ನು ರಚಿಸಿ ಎಲ್ಲರಿಗೂ ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಪಟ್ನಾಯಕ್ ಅವರು ಸುಮಾರು ಏಳು ಟನ್ ಮರಳನ್ನು ಹಾಗೂ 12 ಬಗೆಯ ಹಣ್ಣುಗಳನ್ನು ಬಳಸಿ 7 ಅಡಿ ಎತ್ತರದ ಮರಳಿನ ಶಿಲ್ಪವನ್ನು ರಚಿಸಿದ್ದಾರೆ. ಇದನ್ನು ರಚಿಸಲು ಐದು ಗಂಟೆಗಳನ್ನು ತೆಗೆದುಕೊಂಡಿರುವ ಇವರ ಕೈಚಳಕವನ್ನು ಕಡಲತೀರಕ್ಕೆ ಬರುವ ಕಲಾಪ್ರೇಮಿಗಳು ಮೆಚ್ಚಿಕೊಳ್ಳುತ್ತಿದ್ದಾರೆ.
Last Updated : Feb 3, 2023, 8:28 PM IST