ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಗೋವಾ ಸಿಎಂ ಸಾವಂತ್ ಭೇಟಿ - ಗೋವಾ ಸಿಎಂ ಡಾ ಪ್ರಮೋದ್ ಸಾವಂತ್
ಬಂಟ್ವಾಳ: "ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆಯಾದ ಸ್ಕಿಲ್ ಇಂಡಿಯಾದಿಂದ ನವಪೀಳಿಗೆಗೆ ವೃತ್ತಿ ಆಧಾರಿತ ಕೋರ್ಸ್ಗಳಿಗೆ ಪ್ರೇರೇಪಣೆ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು" ಎಂದು ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಸಲಹೆ ನೀಡಿದರು. ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಇಂದು ಭೇಟಿ ನೀಡಿದ ಅವರು, ಕೇಂದ್ರದ ಸ್ಥಾಪಕ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಚಿಂತನೆಯಲ್ಲಿ ನೀಡಲಾಗುತ್ತಿರುವ ಸಂಸ್ಕಾರಯುತ ಶಿಕ್ಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾಕೇಂದ್ರದ ವಿವಿಧ ಚಟುವಟಿಕೆಗಳನ್ನು ಗಮನಿಸಿದ ಸಿಎಂ ಸಾವಂತ್, ಪಿಯು ವಿದ್ಯಾರ್ಥಿಗಳ ದೀಪಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಡಾ.ಕಲ್ಲಡ್ಕ ಪ್ರಭಾಕರ ಭಟ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಂಗಳೂರು ದಕ್ಷಿಣ ಶಾಸಕ ಬಿ.ವೇದವ್ಯಾಸ ಕಾಮತ್ ಹಾಜರಿದ್ದರು.
ಇದನ್ನೂಓದಿ:ಬ್ರಾಹ್ಮಣತ್ವವನ್ನು ಯಾರು ಪಾಲಿಸುತ್ತಾರೋ ಅವರೇ ನಿಜ ಬ್ರಾಹ್ಮಣರು: ಶಾಸಕ ಡಿಸಿ ತಮ್ಮಣ್ಣ