ನನ್ನನ್ನೇ ಚುಡಾಯಿಸ್ತಿಯಾ ಎಂದು ಯುವಕನಿಗೆ ನಡು ರಸ್ತೆಯಲ್ಲೇ ಚಪ್ಪಲಿ ಏಟು ಕೊಟ್ಟ ವಿದ್ಯಾರ್ಥಿನಿ - ರೋಡ್ ರೋಮಿಯೋ
ಹಾಸನ :ತನ್ನನ್ನು ಚುಡಾಯಿಸಿದ ಎಂದು ವಿದ್ಯಾರ್ಥಿನಿಯೋರ್ವಳು ಚಪ್ಪಲಿಯಿಂದ ಹುಡುಗನೊಬ್ಬನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದಲ್ಲಿ ನಡೆದಿದೆ. ಜಾಯಚಾಮರಾಜೇಂದ್ರ ಆಸ್ಪತ್ರೆ ಹಾಗೂ ಬಿಎಸ್ಎನ್ಎಲ್ ಕಚೇರಿ ಬಳಿ ಈ ಘಟನೆ ನಡೆದಿದೆ. ಆಟೋ ಒಂದರಲ್ಲಿ ಬಂದು ಇಳಿದ ವಿದ್ಯಾರ್ಥಿನಿಗೆ ರೋಡ್ ರೋಮಿಯೊಬ್ಬ ರೇಗಿಸಿದ ಎಂಬ ಕಾರಣಕ್ಕೆ ಆಕೆ ಆತನ ಮೇಲೆ ಸ್ಥಳದಲ್ಲೇ ಕೂಗಾಡಿದ್ದಾಳೆ. ಸ್ಥಳೀಯರು ಆತನನ್ನು ಹಿಡಿದು ಪ್ರಶ್ನೆ ಮಾಡಿದಾಗ ಇದ್ದಕ್ಕಿದ್ದಂತೆ ವಿದ್ಯಾರ್ಥಿನಿ ಚಪ್ಪಲಿಯಿಂದ ಯುವಕನ ಮುಖಕ್ಕೆ ಹೊಡೆದಿದ್ದಾಳೆ. ಈ ವೇಳೆ ಕೋಪೋದ್ರಿಕ್ತರಾದ ಸ್ಥಳೀಯರು ಆತನಿಗೆ ಸ್ಥಳದಲ್ಲೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಮತ್ತು ವಿದ್ಯಾರ್ಥಿನಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಐದಾರು ತಿಂಗಳ ಹಿಂದೆ ಹಳೆ ಬಸ್ ನಿಲ್ದಾಣದ ಪಾರ್ಕ್ ಒಂದರಲ್ಲಿ ಹುಡುಗಿಯನ್ನ ರೇಗಿಸಿದ ಎಂಬ ಕಾರಣಕ್ಕೆ ಆತನನ್ನು ಬೆತ್ತಲು ಮಾಡಿ ಮೆರವಣಿಗೆ ಮಾಡಿದ್ದ ಘಟನೆ ಬೆನ್ನಲ್ಲೇ ಈಗ ಮತ್ತೊಂದು ಘಟನೆ ನಡೆದಿದೆ. ಸದ್ಯ ಈ ಪ್ರಕರಣ ಹಾಸನ ನಗರ ಠಾಣೆಯ ವ್ಯಾಪ್ತಿಯಲ್ಲಿ ನಡೆದಿತ್ತು.
ಇದನ್ನೂ ಓದಿ :ಪುತ್ತೂರು: ವಿವಾಹಿತೆಯೊಂದಿಗಿನ ಪ್ರೇಮ ವಿಚಾರ, ಮರ್ಯಾದೆಗೆ ಅಂಜಿ ವಿವಾಹಿತ ಆತ್ಮಹತ್ಯೆ