ಚಾಲಕನ ಅನುಚಿತ ವರ್ತನೆ: ಚಲಿಸುತ್ತಿದ್ದ ಆಟೋದಿಂದ ಜಿಗಿದ ಯುವತಿ.. ವಿಡಿಯೋ - ಈಟಿವಿ ಭಾರತ ಕನ್ನಡ ನ್ಯೂಸ್
ಔರಂಗಾಬಾದ್ (ಮಹಾರಾಷ್ಟ್ರ): ಚಾಲಕ ಅಶ್ಲೀಲವಾಗಿ ಮಾತನಾಡಿದ್ದಕ್ಕೆ ಯುವತಿಯೊಬ್ಬಳು ಚಲಿಸುತ್ತಿದ್ದ ಆಟೋ ರಿಕ್ಷಾದಿಂದ ಹೊರಗೆ ಜಿಗಿದಿರುವ ಘಟನೆ ಔರಂಗಾಬಾದ್ನಲ್ಲಿ ನಡೆದಿದೆ. ಇದರಿಂದ ಯುವತಿಯ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸ್ ಇನ್ಸ್‌ಪೆಕ್ಟರ್ ಗಣಪತ್ ದಾರಾಡೆ ಮಾತನಾಡಿ, ನವೆಂಬರ್ 13ರಂದು ಯುವತಿಯು ತನ್ನ ನೀಟ್ ಕೋಚಿಂಗ್ ತರಗತಿಯಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವಳನ್ನು ಕರೆದುಕೊಂಡು ಹೋಗಲು ಸಾಮಾನ್ಯವಾಗಿ ತಂದೆ ಅಥವಾ ಸಹೋದರ ಬರುತ್ತಿದ್ದರು. ಆದರೆ ಅಂದು ಅವರು ಬಾರದ ಕಾರಣ ಯುವತಿ ಆಟೋದಲ್ಲಿ ಬಂದಿದ್ದಾಳೆ. ಆಟೋ ಚಾಲಕನ ಅನುಚಿತ ವರ್ತನೆಯಿಂದ ಭಯಗೊಂಡು ಹೊರಗಡೆ ಜಿಗಿದಿದ್ದಾಳೆ ಎಂದು ಹೇಳಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಆರೋಪಿ ಸೈಯದ್ ಅಕ್ಬರ್ನನ್ನು ಪೊಲೀಸರು ಬಂಧಿಸಿದ್ದಾರೆ.
Last Updated : Feb 3, 2023, 8:32 PM IST