ಬ್ಯುಸಿ ರಸ್ತೆಯಲ್ಲಿ ಸೊಂಟ ಬಳುಕಿಸಿದ ಯುವತಿ.. ಪೊಲೀಸ್ ಇಲಾಖೆಯಿಂದ ಭಾರಿ ದಂಡ! - ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಯುವತಿ
ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಯುವತಿಯೊಬ್ಬಳು ರಸ್ತೆಯಲ್ಲಿ ಡ್ಯಾನ್ಸ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಈಗ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಂಚಾರ ಪೊಲೀಸರು ಯುವತಿಗೆ 17 ಸಾವಿರ ದಂಡ ವಿಧಿಸಿದ್ದಾರೆ. ದೆಹಲಿಯಿಂದ ರಾಜ್ ನಗರ ವಿಸ್ತರಣೆಗೆ ಸಂಪರ್ಕಿಸುವ ಎಲಿವೇಟೆಡ್ ರಸ್ತೆಯಲ್ಲಿ ಯುವತಿಯೊಬ್ಬಳು ಡ್ಯಾನ್ಸ್ ಮಾಡಿದ ಪ್ರಕರಣ ಮುನ್ನೆಲೆಗೆ ಬಂದಿದೆ.
ಎಲಿವೇಟೆಡ್ ರಸ್ತೆಯಲ್ಲಿ ನಿಲ್ಲಿಸಿರುವ ವಿಡಿಯೋದಲ್ಲಿ ಯುವತಿಯ ಕಾರು ಸಹ ಗೋಚರಿಸುತ್ತದೆ. ಇದೀಗ ವೈರಲ್ ವಿಡಿಯೋ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಾಹನವನ್ನು ಚಾಲನೆ ಮಾಡುವುದರೊಂದಿಗೆ ಯುವತಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಎಲಿವೇಟೆಡ್ ರಸ್ತೆಯಲ್ಲಿ ಈ ರೀತಿ ವಿಡಿಯೋ ಮಾಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿಗೆ ಇಂತಹ ಹಲವು ಪ್ರಕರಣಗಳು ಮುನ್ನೆಲೆಗೆ ಬಂದಿವೆ.
ಇಂತಹ ಪ್ರಕರಣಗಳ ವಿರುದ್ಧ ಅನೇಕ ಕ್ರಮ ಕೈಗೊಂಡರೂ ಸಹ ಈ ಬಗ್ಗೆ ಜನರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಲಿವೇಟೆಡ್ ರಸ್ತೆಯಲ್ಲಿ ಜನರು ಇಂತಹ ಕೃತ್ಯವನ್ನು ಮಾಡಬಾರದು ಎಂದು ಸಂಚಾರಿ ಠಾಣೆಯ ಪೊಲೀಸರು ಹಲವಾರು ಬಾರಿ ಸಲಹೆ ನೀಡಿದ್ದಾರೆ. ಏಕೆಂದರೆ ಇಲ್ಲಿ ಸಂಚಾರ ಅತ್ಯಂತ ವೇಗವಾಗಿ ಇರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಯಿದೆ ಎನ್ನುತ್ತಾರೆ ಪೊಲೀಸರು. ಆದರೆ ಜನರು ಛಾಯಾಚಿತ್ರಗಳನ್ನು ತೆಗೆಯುವಾಗ ತಮ್ಮ ಪ್ರಾಣವನ್ನು ಮಾತ್ರವಲ್ಲದೇ ಇತರರ ಪ್ರಾಣವನ್ನೂ ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಓದಿ:ಬೆನ್ನಿಗೆ ಈಟಿ ಚುಚ್ಚಿಕೊಂಡು ನೇತಾಡುವಾಗ ದಿಢೀರ್ ಕುಸಿದು ಬಿದ್ದ ಕ್ರೇನ್! ನಾಲ್ವರು ಭಕ್ತರ ದಾರುಣ ಸಾವು