ಯುಪಿಎ ಅವಧಿಯಲ್ಲಿ ಕಾಂಗ್ರೆಸ್ನಲ್ಲೇ ಮಹಿಳಾ ಮೀಸಲಾತಿಗೆ ವಿರೋಧ ಇತ್ತು: ಗುಲಾಂ ನಬಿ ಆಜಾದ್ - ಮಹಿಳಾ ಮೀಸಲಾತಿ ಮಸೂದೆ
Published : Oct 2, 2023, 7:40 PM IST
ಜಮ್ಮು ಮತ್ತು ಕಾಶ್ಮೀರ:ಇದೀಗಸಂಸತ್ತಿನಲ್ಲಿ ಪಾಸಾಗಿ, ರಾಷ್ಟ್ರಪತಿಗಳು ಅಂಕಿತ ಹಾಕಿರುವ ಐತಿಹಾಸಿಕ ಮಹಿಳಾ ಮೀಸಲಾತಿಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಾಯಕರೇ ವಿರೋಧ ವ್ಯಕ್ತಪಡಿಸಿದ್ದರು ಎಂಬ ಕುತೂಹಲಕಾರಿ ಅಂಶವನ್ನು ಕಾಂಗ್ರೆಸ್ನ ಮಾಜಿ ನಾಯಕ, ಆಜಾದ್ ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಜಾದ್ ಬಹಿರಂಗಪಡಿಸಿದ್ದಾರೆ.
ಇಂದು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಆಜಾದ್, ಮಹಿಳಾ ಮೀಸಲಾತಿ ಮಸೂದೆಯು 30 ವರ್ಷಗಳ ಹಿಂದೆಯೇ ಬರಬೇಕಿತ್ತು. ಆದರೆ ಕೊನೆಗೂ ಈಗ ಅಂಗೀಕಾರವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ನಲ್ಲೇ ಮಸೂದೆ ವಿರುದ್ಧ ಅಪಸ್ವರ ಕೇಳಿಬಂದಿತ್ತು. ಒಮ್ಮತ ಮೂಡದ ಕಾರಣ ಅಂದು ಮಸೂದೆ ಮಂಡನೆಗೆ ಬರಲಿಲ್ಲ. ಈಗ ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜಕೀಯ ಪಕ್ಷಗಳು ಯಾವುದೇ ಪ್ರತಿರೋಧವಿಲ್ಲದೇ ಪಾಸು ಮಾಡಿವೆ. ಅಭಿನಂದನೆಗಳು ಎಂದು ಹೇಳಿದರು.
ಮಹಿಳಾ ಮೀಸಲಾತಿ ಮಸೂದೆ ತನ್ನದು ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ಕಾಂಗ್ರೆಸ್ ಅಂದಿನ ಸರ್ಕಾರದ ಅವಧಿಯಲ್ಲಿ ವಿರೋಧ ವ್ಯಕ್ತಪಡಿಸಿದೆ ಎಂಬ ಹೇಳಿಕೆ ಚರ್ಚಾ ವಿಷಯವಾಗಿದೆ. ಪಕ್ಷದ ನಾಯಕಿ ಸೋನಿಯಾ, ರಾಹುಲ್ ಗಾಂಧಿ ಸೇರಿದಂತೆ ಎಲ್ಲ ನಾಯಕರೂ ಮಹಿಳಾ ಮಸೂದೆಯ ಕ್ರೆಡಿಟ್ ತಮ್ಮದೆಂದು ವಾದಿಸುತ್ತಿದ್ದಾರೆ.
ಇದನ್ನೂ ಓದಿ:'ಗಲಭೆಕೋರರು, ಕಲ್ಲು ತೂರಾಟದಿಂದ ರಾಜಸ್ಥಾನವನ್ನು ರಕ್ಷಿಸಿ': ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ