ಕರ್ನಾಟಕ

karnataka

ನಾಮಕರಣ ಶುಭ ಸಮಾರಂಭದಲ್ಲಿ ಗ್ಯಾಸ್ ಬಲೂನ್ ಸ್ಫೋಟ

ETV Bharat / videos

ನಾಮಕರಣ ಶುಭ ಸಮಾರಂಭದಲ್ಲಿ ಗ್ಯಾಸ್ ಬಲೂನ್ ಸ್ಫೋಟ - ಮೈಸೂರು ಹುಣಸೂರು ರಸ್ತೆ

By

Published : Feb 26, 2023, 7:57 PM IST

ಮೈಸೂರು :ನಾಮಕರಣ ಶುಭ ಸಮಾರಂಭ ಕಾರ್ಯಕ್ರಮದಲ್ಲಿ ಗ್ಯಾಸ್ ಬಲೂನ್ ಸ್ಫೋಟವಾಗಿ ಓರ್ವರಿಗೆ ಗಾಯವಾಗಿದೆ. ಅದೃಷ್ಟವಶಾತ್ ಹೆಚ್ಚಿನ ಅಪಾಯ ತಪ್ಪಿದ ಘಟನೆ ನಗರದಲ್ಲಿ ನಡೆದಿದೆ. ಮೈಸೂರು ಹುಣಸೂರು ರಸ್ತೆಯಲ್ಲಿರುವ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ಭಾನುವಾರ, ಮಗುವಿನ ನಾಮಕರಣ ಶಾಸ್ತ್ರವನ್ನು ಹಮ್ಮಿಕೊಳ್ಳಲಾಗಿತ್ತು. ಮಗು ಎತ್ತಿಕೊಂಡು ದಂಪತಿಯು ಸಮಾರಂಭಕ್ಕೆ ಬರುವಾಗ ಗ್ಯಾಸ್ ಬಲೂನ್ ಸ್ಪೋಟವಾಗಿದೆ. 

ಈ ವೇಳೆ ಪಕ್ಕದಲ್ಲಿದ್ದ ಗಾಯಿತ್ರಿಪುರಂ ನಿವಾಸಿ ಪ್ರಶಾಂತ್‌ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ. ಕ್ಷಣಾರ್ಧದಲ್ಲಿ ಶುಭ ಸಮಾರಂಭದಲ್ಲಿ ಆತಂಕ ಎದುರಾಗಿತ್ತು. ಗಾಯಗೊಂಡಿರುವ ಪ್ರಶಾಂತ್ ಚಿಕಿತ್ಸೆ ಪಡೆಯುತ್ತಿದ್ದಾರೆ. 

ABOUT THE AUTHOR

...view details